* ಯುಐಗೆ ವಿಶ್ವ ಸಿನಿಮಾ ಮನ್ನಣೆ *
* ಕ್ಷಣ ಕ್ಷಣವೂ ಹೆಚ್ಚಾದ ಕುತೂಹಲ *
* ಶಿವಣ್ಣ, ವಿಜಿ, ಧನಂಜಯ್ ಪ್ರಶಂಸೆ *
ಇದೇ 20 ರಂದು ಬಿಡುಗಡೆ ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಬಿಡುಗಡೆಗೆ ಇಡೀ ವಿಶ್ವ ಎದುರು ನೋಡುತ್ತಿದೆ.
ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಯುಐ’ ನ ಹೆಸರು ರಾರಾಜಿಸುತ್ತಿದ್ದು, ಇದು ಕನ್ನಡ ಸಿನಿಮಾದ ಅತಿ ದೊಡ್ಡ ಸಾಧನೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಹೇಗೆಂದರೆ ಐಎಂಡಿಬಿ ನಿರೀಕ್ಷೆಗಳ ಪಟ್ಟಿಯಲ್ಲಿ ‘ಯುಐ’ ಹೆಸರಿದೆ. ಹಾಗಾಗಿ ಚಿತ್ರದ ಬಗ್ಗೆ ವಿಶ್ವ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂಬುದು ಅದರ ವಿವರ.
ಈಚೆಗೆ ಚಿತ್ರದ ಬಿಡುಗಡೆ ಪೂರ್ವ ಇವೆಂಟ್ ನಲ್ಲಿ ಚಿತ್ರರಂಗದ ಗಣ್ಯರು ಉಪೇಂದ್ರ ನಿರ್ದೇಶನ ಮತ್ತು ಕಾರ್ಯ ವೈಖರಿಯನ್ನು ಹಾಡಿ ಹೊಗಳಿದರು.
ಬಿಡುಗಡೆಗೆ ಒಂದು ವಾರ ಮುಂಚೆಯೇ ತೆರೆದುಕೊಂಡ ಟಿಕೆಟ್ ಮಾರಾಟ ಆ ಕ್ಷಣದಿಂದಲೇ ಬುಕ್ ಆಗಿ ಹೊಸ ದಾಖಲೆಯೇ ನಿರ್ಮಾಣವಾಗಿದೆ ಎಂಬ ವಿವರಗಳು ಬಂದವು.
ಯುಐ ಚಿತ್ರ ನೋಡಲು ಬುಕ್ಕಿಂಗ್ ಅವಕಾಶ ತೆರೆದುಕೊಂಡ ತಕ್ಷಣವೇ ದಾಖಲೆ ಪ್ರಮಾಣದ ಟಿಕೆಟ್ ಮಾರಾಟವಾಗಿವೆ ಎಂದು ಕೆವಿಎನ್ ಸಂಸ್ಥೆಯ ಸುಪ್ರೀತ್, ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ವಿವರಗಳನ್ನು ನೀಡಿದರು.
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯವನ್ನು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊಂಡಾಡಿದರು. ಜೊತೆಗೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ಯ ಅವರು ಶಿವಣ್ಣ ಹಾಗೂ ಉಪೇಂದ್ರ ಅವರ ಸ್ನೇಹತ್ವವನ್ನು ಹೊಗಳಿದರು.
ನಿರ್ಮಾಪರಾದ ಉದಯ್ ಮೆಹ್ತಾ
ರಮೇಶ್ ರೆಡ್ಡಿ, ಯೋಗಿ, ಕಾರ್ತಿಕ್ ಗೌಡ, ಜಗದೀಶ್, ನಿರ್ದೇಶಕರಾದ
ಡಾ.ಸೂರಿ, ಪವನ್ ಒಡೆಯರ್, ನಟಿಯರಾದ ಮೇದಿನಿ, ನೀತು, ನಿಧಿ ಸುಬ್ಬಯ್ಯ ಹಾಗೂ ನಟ
ಕಾರ್ಕೋಚ್ ಸುಧಿ, ರವಿಶಂಕರ್ ಚಿತ್ರ ಹಾಗೂ ಉಪ್ಪಿ ಶ್ರಮ ಕುರಿತು ಮಾತನಾಡಿದರು.
ಪ್ರಿಯಾಂಕ ಉಪೇಂದ್ರ ಹಾಗೂ
ರೀಶ್ಮಾ ನಾಣಯ್ಯ ಉಪೇಂದ್ರ ಅವರ ಕಾರ್ಯ ಕ್ಷಮತೆಯನ್ನು ಹೊಗಳಿದರು. ಚಿತ್ರವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಲಹರಿ ಸಂಸ್ಥೆ ಹಾಗೂ ವೀನಸ್ ಎಂಟರ್ ಪ್ರೈಸಸ್ ನ ಮನೋಹರ ನಾಯ್ಡು, ಲಹರಿ ವೇಲು ಹಾಗೂ ಕೆ.ಪಿ.ಶ್ರೀಕಾಂತ್ ಉಪ್ಪಿಯ ಶ್ರಮ ಮತ್ತು ಔದಾರ್ಯವನ್ನು ಕೊಂಡಾಡಿದರು.
ಈ ಅದ್ದೂರಿ ಪ್ರಚಾರ ಸಭೆಯಲ್ಲಿ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಸೇರಿದಂತೆ ಚಿತ್ರದಲ್ಲಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು ಉಪೇಂದ್ರ.
ಯುಐ ಎಂದರೆ ಅದು ಉಪ್ಪಿ ಹುಳ. ಚಿತ್ರ ನೋಡಿದ ನಂತರ ಅರ್ಥವಾಗಬಹುದು. ಅಲ್ಲಿಯವರೆಗೆ ಯೂಸ್ ಯುವರ್ ಇಂಟಲಿಜೆನ್ಸ್, ನಾನು ಮತ್ತು ನೀನು, ಯುನಿವರ್ಷಲ್ ಇಂಟಲಿಜೆನ್ಸ್ ಹೀಗೆ ಅನೇಕ ಕಲ್ಪನೆಗಳು ಸಭೆಯಲ್ಲಿಯೂ ಲಾಸ್ಯವಾಡಿದವು.