ಚಿತ್ರವಿಚಿತ್ರ ಹೆಸರುಗಳಿಂದಲೇ ಕೆಲವು ಚಿತ್ರಗಳು ಗಮನ ಸೆಳೆಯುತ್ತವೆ. ಅಂದ ಹಾಗೆ ಈ ಚಿತ್ರದ ಹೆಸರು ‘ಆನ್ ಲೈನ್ ಮದುವೆ ಆಫ್ ಲೈನ್ ಶೋಭನ’.
ಇದೊಂದು ನಕ್ಕು ನಗಿಸುವ ಚಿತ್ರವೆಂದು ಚಿತ್ರತಂಡ ಬಿಡುಗಡೆ ಮಾಡಿರುವ ಸ್ಟಿಲ್ ಗಳು ಹೇಳುತ್ತಿವೆ..
ಈ ಹಿಂದೆ ಗರ್ಭದಗುಡಿ, 141, ಅಕ್ಕಭಾವ ಬಾಮೈದ, ನೀನೇನಾ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಅವರೀಗ ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿರುವ ಆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಸದ್ಯವೇ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳು ಚಿತ್ರವೂ ತೆರೆ ಕಾಣಲಿದೆ.
ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರವು ಪರಿಶುದ್ದವಾದ ಹಾಸ್ಯ, ಜೊತೆಗೆ ಕೌಟುಂಬಿಕ ಮನರಂಜನೆಯ ಕಥಾಹಂದರ ಹೊಂದಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಹಾಗೂ ಆನೇಕಲ್ ನ ಸುಗ್ಗಿ ರೆಸಾರ್ಟ್, ಕೋರಮಂಗಲದ ಪಬ್ ವೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದು ಚಿತ್ರತಂಡದ ಮಾಹಿತಿ.
ಜಗಪ್ಪ, ಸುಶ್ಮಿತಾ, ಸೀರುಂಡೆ ರಘು, ಗಜೇಂದ್ರ, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಮತ್ತು ಯಶಸ್ವಿನಿ, ಚಂದನ, ಶರಣ್ಯರೆಡ್ಡಿ, ಆಂಕರ್ ದಯಾನಂದ್ ಇದರಲ್ಲಿ ಅಭಿನಯಿಸಿದ್ದಾರೆ.
ಬಾಲು ಛಾಯಾಗ್ರಹಣ, ರೋಹಿತ್ ಸಂಕಲನ, ಅಲೆಕ್ಸ್ ಸಂಗೀತ, ಅರುಣ ಪ್ರಸಾದ್ ಸಾಹಿತ್ಯ, ಗಣೇಶ್, ಸದಾಶಿವ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.