ಹಾರರ್ ಕಾಮಿಡಿ ‘ಛೂ ಮಂತರ್’ ಚಿತ್ರದಲ್ಲಿ ಶರಣ್ ಜೊತೆಗೆ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
ಮುಖ್ಯವಾಗಿ ಇದು ಶರಣ್ ಹಾಗೂ ಚಿಕ್ಕಣ್ಣ ಜೊತೆಗೂಡಿರುವ ಚಿತ್ರ. ಈ ಕಾಮಿಡಿ ಕಿಲಾಡಿ ಜೋಡಿ ಮತ್ತೆ ಕಮಾಲ್ ಮಾಡಲಿದೆ.
ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರಕ್ಕೆ
‘ಕರ್ವ’ ಮೂಲಕ ಹೆಸರಾಗಿರುವ ನವನೀತ್ ನಿರ್ದೇಶಕರು.
ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ.