Snehapriya.com

June 7, 2025

ಜೋಡರ್ನ್’ ಟ್ರೇಲರ್ ಬಿಡುಗಡೆ

Social Share :

ಸಂಪತ್ ಮೈತ್ರೇಯ ಹಾಗೂ ಮಹೇಂದ್ರ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿರುವ ಹಾಗೂ ವಿನೋದ್ ಧಯಾಳನ್ ನಿರ್ದೇಶನವಿರುವ ‘ಜೋಡರ್ನ್’ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದೆ.

ಚಿತ್ರವು ಡಿಸೆಂಬರ್ 30ರಂದು ಬಿಡುಗಡೆ ಕಾಣುತ್ತಿದ್ದು, ಟ್ರೈಲರ್ ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಅಮೇರಿಕನ್ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡನ್ ಹೇಳಿರುವ ‘ವೈಫಲ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫಲರಾಗುತ್ತಾರೆ ಆದರೆ ಪ್ರಯತ್ನ ಪಡದೇ ವೈಫಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ
ಎಂಬ ವಿವರ ಬಿಚ್ಚಿಟ್ಟರು ನಿರ್ದೇಶಕರು.

ಸೀತಾರ, ಸುನೀಲ್, ಯೋಗೇಶ್ ಶಂಕರ್ ನಾರಾಯಣನ್, ಗಣೇಶ್ ಜೈ ಕುಮಾರ್ ಚಿತ್ರದ ಇತರ ತಾರಾ ಬಳಗದಲ್ಲಿದ್ದಾರೆ.

ಜೆ.ಜಾನಕಿರಾಮ್, ಎನ್ ಆರ್.ಪಾಟೀಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೈಕುಮಾರ್ ಜೆ ಸ್ಟಾಲಿನ್ ಛಾಯಾಗ್ರಹಣ, ಸಾಯಿ ಸರ್ವೇಶ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *