Snehapriya.com

April 14, 2025

ಓಂ ಸಾಯಿಪ್ರಕಾಶ್ @ 100 ಕನ್ನಡದ ಮೊದಲ ನಿರ್ದೇಶಕ

Social Share :

ಶ್ರೀ ಸತ್ಯ ಸಾಯಿ ಅವತಾರ ಮೂಲಕ ಓಂ ಸಾಯಿ ಪ್ರಕಾಶ್ ನೂರು ಚಿತ್ರಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಕನ್ನಡದಲ್ಲಿ ನೂರು ಚಿತ್ರಗಳನ್ನು ನಿರ್ದೇಶಿಸಿದ ಮೊಟ್ಟ ಮೊದಲ ನಿರ್ದೇಶಕ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಜುಲೈ 18ರ ಸೋಮವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ಶ್ರೀ ಸತ್ಯಸಾಯಿ ಅವತಾರ ಚಿತ್ರದ
ಶೀರ್ಷಿಕೆ ಅನಾವರಣಗೊಂಡಿತು..

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಆನಂದ ಗುರೂಜಿ ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸಿದರು. ಸಾಯಿಗೋಲ್ಡ್ ಸರವಣ , ನಿರ್ಮಾಪಕ ಡಾ.ದಾಮೋದರ್, ಹಿರಿಯಸಾಹಿತಿ ದೊಡ್ಡರಂಗೇಗೌಡ, ಕಲಾವಿದರಾದ ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಪುಟ್ಟಪರ್ತಿ ಸಾಯಿಬಾಬಾ ಅವರ ಪವಾಡಗಳನ್ನು ಮತ್ತು ಮಹಿಮೆಗಳನ್ನು ಸಾರುವ ಕಥೆಯಲ್ಲಿ ಭಕ್ತಿಯ ಸಾರದ ಅಭಿವ್ಯಕ್ತಿ ಕಾಣಲಿದೆ. ಸ್ವತಃ ಸಾಯಿ ಭಕ್ತರಾಗಿರುವ ಓಂ ಸಾಯಿ ಪ್ರಕಾಶ್ ಅವರಿಗೆ ತಮ್ಮ ನೂರನೇ ಚಿತ್ರ ಸಾಯಿ ಮಹಿಮೆಯೇ ಆಗಿರಲಿ ಎಂಬ ಆಶಯ ಈ ಮೂಲಕ ಕೈಗೂಡುತ್ತಿದೆ.

ಭಾರತೀಯ ಕೌಟುಂಬಿಕ ವ್ಯವಸ್ಥೆಯ ಭಾವನಾತ್ಮಕ ವಿಷಯಗಳನ್ನು ಮನೋಜ್ಞವಾಗಿ ಚಿತ್ರಿಸುವುದರಲ್ಲಿ ಓಂ ಸಾಯಿ ಪ್ರಕಾಶ್ ಎತ್ತಿದ ಕೈ. ಹಾಗಾಗಿ ಭಕ್ತಿ ರಸದ ಈ ಚಿತ್ರದಲ್ಲಿಯೂ ಭಾವನಾತ್ಮಕ ವಿಷಯಗಳೇ ಪ್ರಧಾನವಾಗಲಿವೆ.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಓಂ ಸಾಯಿ ಪ್ರಕಾಶ್ ಅವರ ಬಾಬಾ ಪ್ರೀತಿಯನ್ನು ಕೊಂಡಾಡಿದರು.
ತಮ್ಮ ಅಧಿಕಾರದ ವೇಳೆ ಎದುರಾಗಿದ್ದ, ಬರ, ಕಾವೇರಿ ವಿವಾದ, ವರನಟ ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಕಹಿ ಘಟನೆ ಹಾಗೂ ಇನ್ನಿತರ ಸಂಕಷ್ಟಗಳ ಸಂದರ್ಭದಲ್ಲಿ ಪುಟ್ಟಪರ್ತಿಗೆ ಭೇಟಿ ನೀಡಿ ಪ್ರಾರ್ಥಿಸಿರುವೆ. ಸಮಸ್ಯೆಗಳು ಪವಾಡ ಸದೃಶ ಎಂಬಂತೆ ನಿವಾರಣೆಯಾಗಿದ್ದವು ಎಂಬ ವಿವರ ನೀಡಿದರು ಎಸ್.ಎಂ.ಕೃಷ್ಷ.

ಬಾಬಾ ದೈವಾಂಶ ಸಂಭೂತರು. ಅವರ ಹೆಸರಿನಲ್ಲಿ ಅತ್ಯುತ್ತಮ ಸಾಮಾಜಿಕ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದವರು ಆನಂದ ಗುರುಜಿ.
ಬಾಬಾರ ಪವಾಡಗಳನ್ನು ಅದ್ಭುತ ಎಂದು ಕವಿ ಡಾ.ದೊಡ್ಡರಂಗೇಗೌಡ ಬಣ್ಣಿಸಿದರು.

ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೆ.ಜಿ. ಕೃಷ್ಣ ಛಾಯಾಗ್ರಹಣ, ಗಣೇಶ್ ನಾರಾಯಣ್ ಸಂಗೀತ,. ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *