ವಿಕ್ರಾಂತ್ ರೋಣ ಬಿಡುಗಡೆಯ ದಿನಗಳು ಹತ್ತಿರವಾಗುತ್ತಿದ್ದಂತೆ ನಾಯಕ ನಟ ಕಿಚ್ಚ ಸುದೀಪ್ ಅವರ ಪ್ರಚಾರದ ಭರಾಟೆ ಮುಂದುವರೆದಿದೆ..
ಜುಲೈ 22ರ ಗುರುವಾರದಿಂದ ಪ್ರಚಾರ ಕೈಗೊಳ್ಳಲಿರುವ ಸುದೀಪ್, ಮೊದಲು ಮುಂಬೈ, ನಂತರ ಹೈದ್ರಾಬಾದ್, ಚೆನ್ನೈ ಹಾಗೂ ದುಬೈನ ಪ್ರಿಮಿಯರ್ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಮಧ್ಯೆ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿದೆ, ಕೊವಿಡ್ ಬಂದಿದೆ ಎಂದೆಲ್ಲಾ ಪ್ರಚಾರವಾಗಿರುವುದನ್ನು ಚಿತ್ರದ ನಿರ್ಮಾಪಕ ಜಾಕ್ ಮಂಜು ತಳ್ಳಿ ಹಾಕಿದ್ದಾರೆ.
ಸುದೀಪ್ ಅವರು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮಳೆಯಲ್ಲಿ ನೆನೆದ ಪರಿಣಾಮ ಜ್ವರ ಬಂದಿದೆ. ಆದರೆ ಅದು ಕೊವಿಡ್ ಅಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ ಜಾಕ್ ಮಂಜು.
ವಿಕ್ರಾಂತ್ ರೋಣ ಹಾಡುಗಳು ಹಿಟ್ ಆಗಿವೆ; ಹಾಗೆಯೇ 3ಡಿ ಟ್ರೈಲರ್ ಥ್ರಿಲ್ ಆಗಿ ಜನಮನ ಗೆದ್ದಿದೆ. ಹಾಗಾಗಿ ಸುದೀಪ್ ಹಾಗೂ ಚಿತ್ರತಂಡ ಉತ್ಸಾಹದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.
ಈಗಾಗಲೇ ದೆಹಲಿಯಲ್ಲಿ ಪ್ರಚಾರ ನಡೆಸಿದ ತಂಡಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.