Snehapriya.com

December 22, 2024

ಡಾ.ಬಿ.ಸರೋಜಾ ದೇವಿ ಅವರಿಗೆ ಫಾಲ್ಕೆ ಪುರಸ್ಕಾರ ಏಕಿಲ್ಲ..!?

Social Share :

* ಬಿ.ಸರೋಜಾದೇವಿ ಹುಟ್ಟುಹಬ್ಬ

* ಚತುರ್ಭಾಷಾ ತಾರೆಗೆ ಸಿಗದ ಗೌರವ

* 86 ವರ್ಷದ ಪೆಂಗಿಳಿ ಸರೋಜಮ್ಮ


ಕನ್ನಡ ಚಿತ್ರರಂಗದ ಮೇರು ನಟಿ ಪದ್ಮಭೂಷಣ ಪುರಸ್ಕೃತ ಚತುರ್ಭಾಷಾ ತಾರೆ ಡಾ.ಬಿ.ಸರೋಜಾದೇವಿ ಅವರಿಗೆ ಭಾರತದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಏಕೆ ನೀಡಲಾಗಿಲ್ಲ ಎಂಬುದು ಚರ್ಚೆಯ ವಿಷಯವಾಗಿದೆ.

ಚತುರ್ಭಾಷಾ ತಾರೆಯಾಗಿರುವ ಬಿ.ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು.

ಮುಖ್ಯವಾಗಿ ಕನ್ನಡದ ವರನಟ ಡಾ.ರಾಜ್ ಕುಮಾರ್, ತಮಿಳಿನಲ್ಲಿ ಎಂ.ಜಿ.ರಾಮಚಂದ್ರನ್ ಹಾಗೂ ಶಿವಾಜಿಗಣೇಶನ್, ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಮೊದಲಾದ ಮಹಾ ಮಹಾ ನಟರಿಗೆ ಜೋಡಿಯಾಗಿ ಚಿತ್ರರಸಿಕರ ಮನ ಗೆದ್ದವರು.

ಇಂತಹ ಅಪ್ರತಿಮ ನಟಿಗೆ ಪದ್ಮಶ್ರೀ ಹಾಗೂ ಪದ್ಮಭೂಷಣ (ತಮಿಳುನಾಡು ಗೌರವ)ದಂತಹ ಪ್ರಶಸ್ತಿಗಳು ದೊರೆತು ಗೌರವ ಹೆಚ್ಚಿಸಿಕೊಂಡಿವೆ. ಆದರೆ ಭಾರತೀಯ ಚಿತ್ರರಂಗದ ಮೇರು ಪ್ರಶಸ್ತಿಯಾಗಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರು ಅರ್ಹರಾಗಿದ್ದರೂ ಅವರಿಗೆ ಏಕೆ ಬಂದಿಲ್ಲ ಎಂಬುದು ಸದ್ಯದ ಪ್ರಶ್ನೆ.

ಹಿರಿಯ ನಟಿ ಡಾ.ಬಿ.ಸರೋಜಾದೇವಿ ಅವರು ಜನವರಿ 7ರಂದು ತಮ್ಮ 86 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಮಹಾನ್ ನಟಿಗೆ ಆ ಗೌರವ ಸಿಗಬೇಕು ಎಂಬುದು ಜನಪ್ರಿಯ ನಿರ್ದೇಶಕ ಎಸ್.ನಾರಾಯಣ್ ಪ್ರಶ್ನೆ.

ಬಾಲಿವುಡ್ ನ ನಟಿಯರನ್ನು ಬೇಗ ಇಂತಹ ಪ್ರಶಸ್ತಿಗೆ ಗುರುತಿಸಲಾಗುತ್ತದೆ (ಉದಾಹರಣೆಗೆ ವಹಿದಾ ರೆಹಮಾನ್, ಆಶಾಪರೇಕ್ ಮೊದಲಾದವರು). ಆದರೆ ನಮ್ಮವರು ಆಯ್ಕೆ ಸಮಿತಿಗೆ ಅಥವಾ ಸರ್ಕಾರಕ್ಕೆ ಏಕೆ ಕಾಣುವುದಿಲ್ಲ ಎಂಬುದು ಅವರ ಪ್ರಶ್ನೆ.

ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿರುವ ಡಾ.ಬಿ.ಸರೋಜಾದೇವಿ ಅವರಿಗೆ ಪ್ರತಿಷ್ಠಿತ ದಾದಾ ಫಾಲ್ಕೆ ಒಲಿಯಲಿ ಎಂಬುದು ಚಿತ್ರರಸಿಕರ ಆಶಯ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *