Snehapriya.com

June 6, 2025

ವಿನೋದ್ ಪ್ರಭಾಕರ್ ಫೈಟರ್ ನೂತನ್ ಉಮೇಶ್ ಟೀಸರ್..

Social Share :


ಚಿತ್ರದ ಹೆಸರು ಫೈಟರ್. ಆದರೆ ಇದು ಜೀವನದ ಹೋರಾಟ ಮತ್ತು ಮೌಲ್ಯಗಳಿರುವ ಚಿತ್ರ. ಹಾಗೆಯೇ ಸಂಪೂರ್ಣ ಮನರಂಜನೆ ಇದೆ..

ಹೀಗೆಂದು ವಿವರ ಕೊಟ್ಟವರು ನಿರ್ದೇಶಕ ನೂತನ್ ಉಮೇಶ್. ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಎಂಬ ಕೌಟುಂಬಿಕ ಚಿತ್ರ ಮಾಡಿ ಗೆದ್ದಿದ್ದ ನೂತನ್ ಉಮೇಶ್ ಸುದೀರ್ಘ ಸಮಯದ ಬಳಿಕ ನಿರ್ದೇಶನ ಮಾಡಿರುವ ಚಿತ್ರವೇ ‘ಫೈಟರ್’.

ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಕಟ್ಟಿಗೇನಹಳ್ಳಿ ಸೋಮ್ ಶೇಖರ್ ನಿರ್ಮಾಣ ಮಾಡಿದ್ದಾರೆ.

ಆಗಸ್ಟ್ 27ರ ಭಾನುವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಚಿತ್ರದ ಟೀಸರ್ ನ್ನು ನಿರ್ಮಾಪಕ ಸೋಮಶೇಖರ್ ಅವರ ತಂದೆ ಕೃಷ್ಣಪ್ಪ ಬಿಡುಗಡೆ ಮಾಡಿದರು.

ನಿರ್ದೇಶಕ ನೂತನ್ ಉಮೇಶ್ ಸ್ವತಃ ನಿರೂಪಣೆ ಮಾಡುತ್ತಿದ್ದರು. ಹಾಗಾಗಿ ಚಿತ್ರದ ಬಗ್ಗೆ ವಿವರಗಳನ್ನು ನೀಡಲು ಅವರಿಗೆ ಹೆಚ್ಚು ಸಮಯವಿತ್ತು. ಕೋವಿಡ್ ಪೂರ್ವದಲ್ಲಿ ಆರಂಭವಾದ ಚಿತ್ರವು ಅನುಭವಿಸಿದ ನಿಧಾನಗತಿಯ ಕಷ್ಟ ನಷ್ಟಗಳನ್ನು ವಿವರಿಸಿದರು.

ಚಿತ್ರದ ಮುಹೂರ್ತಕ್ಕೆ ಮರಿಟೈಗರ್ ಅಭಿಮಾನಿಗಳ ಸಡಗರದಲ್ಲಿ ಬಿಡುಗಡೆಯಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಗೆಳೆಯನಿಗೆ ಶುಭ ಕೋರಿದ್ದರು. ಈಗ ಹಿರಿಯರಾದ ಕೃಷ್ಣಪ್ಪ ಅವರಿಂದ ಟೀಸರ್ ಬಿಡುಗಡೆ ಕಂಡಿರುವುದು ಖುಷಿ ತಂದಿದೆ ಎಂದರು ನೂತನ್ ಉಮೇಶ್.

ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮುಖ್ಯವಾಗಿ ಪಾವನಾ ಹಾಗೂ ಲೇಖಚಂದ್ರ ಎಂಬ ಮುದ್ದಾದ ನಟಿಯರಿದ್ದಾರೆ. ಅಲ್ಲದೆ ಸುಮಾರು ವರ್ಷಗಳ ನಂತರ ನಟಿ ನಿರೋಷಾ ತಾಯಿಯ ಪಾತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ ಎಂಬ ವಿವರವೂ ಬಂತು.

ಮತ್ತೊಂದು ವಿಶೇಷವೆಂದರೆ ಗುರುಕಿರಣ್ ಈ ಚಿತ್ರದ ಸಂಗೀತ ನಿರ್ದೇಶಕ. ನಿರೋಷಾ ಅವರ ಜೊತೆ ಬಹಳ ಹಿಂದೆ ಪಾತ್ರ ಮಾಡಿದ್ದೆ ಎಂಬುದನ್ನು ನೆನಪಿಸಿಕೊಂಡರು ಗುರುಕಿರಣ್.

‘ಪ್ರತಿಯೊಬ್ಬ ಫೈಟರ್ ನಲ್ಲಿ ತಂದೆಯವರನ್ನು ನೋಡುತ್ತೇನೆ..’ ಎಂದು ಭಾವುಕರಾದರು ವಿನೋದ್ ಪ್ರಭಾಕರ್. ಏಕೆಂದರೆ ಫೈಟರ್ ಆಗಿ ಚಿತ್ರರಂಗಕ್ಕೆ ಬಂದವರು ಅಪ್ಪ..
ಈ ಫೈಟರ್ ನಲ್ಲಿ ಹೊಡೆದಾಟ ಮಾತ್ರವಿಲ್ಲ; ಇಲ್ಲಿ ಕೌಟುಂಬಿಕ ಕಥೆ ಇದೆ. ತಾಯಿ ಮಗನ ಬಾಂಧವ್ಯದ ಸನ್ನಿವೇಶಗಳಿವೆ. ಒಂದು ಉತ್ತಮ ಕೌಟುಂಬಿಕ ಚಿತ್ರ ಇದಾಗಿದೆ ಎಂದು ವಿವರಿಸಿದರು ವಿನೋದ್ ಪ್ರಭಾಕರ್.

ಇದೇ ವೇಳೆ ನಿರೋಷಾ ಅವರಿಂದ ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದರು ವಿನೋದ್ ಪ್ರಭಾಕರ್.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಟೈಗರ್ ಪ್ರಭಾಕರ್ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಚಿತ್ರದಲ್ಲಿ ನಟಿಸಿರುವ ದೀಪಕ್ ಶೆಟ್ಟಿ, ಪಾವನಾ, ಲೇಖಚಂದ್ರ ಹಾಗೂ ಇತರರು ಮಾತನಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *