ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಚಿತ್ರದ ಅಪರೂಪದ ಹಾಡು ‘ಹೇ ಫಕೀರ..’ ಬಿಡುಗಡೆಗೊಂಡಿದೆ; ಜೊತೆಗೆ ಚಿತ್ರವು ಭರ್ಜರಿ ವ್ಯಾಪಾರವಾಗುತ್ತಿದೆ.
ಅಚ್ಚರಿಯ ಸಂಗತಿ ಏನೆಂದರೆ ಈ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು.. ಹೇ.. ಫಕೀರ.. ಹಾಡಿನಲ್ಲಿ ನಿರೂಪ್ ಕಾಣಿಸಿಕೊಂಡಿದ್ದಾರೆ. ಅದ ಹಾಗೆ ಆ ಪಾತ್ರದ ಹೆಸರು ‘ಸಂಜು ಗಂಭೀರ’.
ಸಂಜು ಗಂಭೀರ ಪಾತ್ರವು ಎಣಿಕೆಗೆ ನಿಲುಕದಂತಹ ಕುತೂಹಲ ಹುಟ್ಟಿಸುವ ಪಾತ್ರವಾಗಿದೆ ಮತ್ತು ಹೇ ಫಕೀರ ಹಾಡಿನ ಹೈಲೈಟ್ ಕೂಡ ಅದೇ ಆಗಿದೆ ಎಂಬುದು ನಿರ್ದೇಶಕ ಅನೂಪ್ ಭಂಡಾರಿ ವಿವರಣೆ.
ಈ ತಿಂಗಳ 28ರಂದು ತ್ರಿಡಿ ರೂಪದಲ್ಲಿ ‘ವಿಕ್ರಾಂತ್ ರೋಣ’ ಬಿಡುಗಡೆ ಕಾಣುತ್ತಿದೆ. ಚಿತ್ರದ ‘ರಾ ರಾ ರಕ್ಕಮ್ಮ..’ ಹಾಡು ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆಗಿದೆ. ಜೊತೆಗೆ ವಿಜಯಪ್ರಕಾಶ್ ಹಾಡಿರುವ ತಾಯಿ ಸೆಂಟಿಮೆಂಟ್ ಹಾಡು ರಸಿಕರ ಮನ ಗೆದ್ದಿದೆ. ಹಾಗಾಗಿ ‘ಸುದೀಪ್ ಖುಷಿಯಾಗಿದ್ದಾರೆ ಮತ್ತು ಜಾಕ್ ಮಂಜು ವ್ಯಾಪಾರದಲ್ಲಿ ಬ್ಯುಜಿಯಾಗಿದ್ದಾರೆ’.
ಮುಖ್ಯವಾಗಿ ಅನಿವಾಸಿ ಭಾರತೀಯ ಅಂದರೆ ಹೊರ ದೇಶದ ಹಕ್ಕುಗಳನ್ನು ದ್ವಾರಕೀಶ್ ಸಂಸ್ಥೆಯ ಯೋಗಿ ದ್ವಾರಕೀಶ್ ಪಡೆದುಕೊಂಡಿದ್ದು, ಭಾರತೀಯ ಮಟ್ಟದಲ್ಲಿ ಪಿವಿಆರ್ ಪಿಕ್ಚರ್ಸ್ ಉತ್ತರ ಭಾರತದ ವಿತರಣಾ ಹಕ್ಕುಗಳನ್ನು ಪಡೆದಿದೆ. ಜೊತೆಗೆ ಸಲ್ಮಾನ್ ಖಾನ್ ಫಿಲ್ಸಂ, ಝೀ ಸ್ಟುಡಿಯೋ ಸ್ ಸಹಕಾರ ಹೊಂದಿದೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಉತ್ತರ ಕರ್ನಾಟಕ ವ್ಯಾಪಾರ ಮುಗಿದಿದೆ ಎಂಬುದು ಜಾಕ್ ಮಂಜು ತಂಡದ ವಿವರಣೆ. ಇನ್ನೂ ವ್ಯಾಪಾರದ ಮಾತುಕತೆ ಮುಂದುವರೆದಿದೆ.