Snehapriya.com

June 8, 2025

ಉಪೇಂದ್ರ ಹೋಂ ಮಿನಿಸ್ಟರ್ ವಿಭಿನ್ನ ಬಗೆಯ ಚಿತ್ರ..

Social Share :

ಈ ಚಿತ್ರದ ತಿರುಳು ಯಾರಿಗೂ ಅರ್ಥವಾಗುವುದು ಕಷ್ಟ. ಏಕೆಂದರೆ ಬುದ್ಧಿವಂತ ಉಪೇಂದ್ರ ಇದರಲ್ಲಿ ನಟಿಸಿದ್ದಾರೆ. ಹೆಸರು ‘ಹೋಂ ಮಿನಿಸ್ಟರ್’ ಸದ್ಯದಲ್ಲೇ ಅಂದರೆ ಏಪ್ರಿಲ್ ಒಂದರಂದು ಚಿತ್ರವು ತೆರೆ ಕಾಣುತ್ತಿದೆ.

ಚಿತ್ರದ ಕಥೆ ಏನೆಂದು ವರ್ಣಿಸಿವುದು ಕಷ್ಟ. ಆದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಹೋಂ ಮಿನಿಸ್ಟರ್ ಇರುತ್ತಾರೆ. ಅವರದೇ ಕಾರುಬಾರು ನಡೆಯುತ್ತದೆ. ಇಲ್ಲಿಯೂ ಅದೇ ನಡೆಯಬಹುದು; ಆದರೆ ನನ್ನ ಪಾತ್ರ ಏನು ಎಂಬುದಕ್ಕೆ ನಿರ್ದಿಷ್ಟ ಚೌಕಟ್ಟು ಇಲ್ಲ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಗ್ಲಾಮರ್ ಗೆ ನಿರ್ಮಾಪಕರು ಬೇಕಾದಷ್ಟು ಹುಡುಗಿಯರನ್ನು ತಂದಿದ್ದಾರೆ. ಆದರೆ ವೇದಿಕಾ ಹೆಂಡತಿಯಾಗಿ ನಟಿಸಿದ್ದಾರೆ. ಇಲ್ಲಿಯೂ ಪಾತ್ರದಲ್ಲಿ ವಿಭಿನ್ನತೆ ಕಾಯ್ದುಕೊಳ್ಳಲಾಗಿದೆ ಎಂದರು.

ನನ್ನದು ನಿಮ್ಮ ಪಾತ್ರ ಅಂದರೆ ಸುಮಾರು ಒಬ್ಬ ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವೆ ಎಂದರು ವೇದಿಕಾ. ಕನ್ನಡದಲ್ಲಿ ಇದು ಎರಡನೇ ಚಿತ್ರ. ಶಿವಣ್ಣ ನಂತರ ಉಪೇಂದ್ರ ಅವರ ಜೊತೆ ನಟಿಸಿರುವೆ. ಇಲ್ಲಿ ಉತ್ತಮ ಅನುಭವಗಳಾದವು. ಹೋಂ ಮಿನಿಸ್ಟರ್ ಅಂದರೆ ನಾನೇ. ನನ್ನ ಮೇಲೆಯೇ ಕಥೆ ಸಾಗುತ್ತದೆ ಎಂದು ಹೇಳುತ್ತಾ ಹೋದರು ವೇದಿಕಾ

ನಿರ್ಮಾಪಕ ಎಸ್.ಪೂರ್ಣ ಚಂದ್ರ ನಾಯ್ಡು, ಮೊದಲು ಈ ಚಿತ್ರವನ್ನು ಕನ್ನಡದಲ್ಲಿ ಮಾಡಿ ಆನಂತರ ತೆಲುಗುಗೆ ಒಗ್ಗಿಸಲಾಗಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಶ್ರೀಕಾಂತ್ ವೀರಮಾಜಿನೇ ಚಿತ್ರಕ್ಕೆ ಸಹಕರಿಸುವಂತೆ ಕೋರಿದರು.

ಸುಜಯ್ ಶ್ರೀಹರಿ ಚಿತ್ರದ ನಿರ್ದೇಶಕ. ಆದರೆ ಅವರು ಗೈರುಹಾಜರಾಗಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *