Snehapriya.com

June 8, 2025

ಬುದ್ಧಿವಂತ-2 ಗೆ ತಾಂತ್ರಿಕ ಅಡಚಣೆ

Social Share :

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ‘ಬುದ್ಧಿವಂತ-2’ ಚಿತ್ರದ ಟೀಸರ್ ಶುಕ್ರವಾರ (ಆಗಸ್ಟ್ 4) ಬಿಡುಗಡೆ ಕಾಣಬೇಕಿತ್ತು. ಆದರೆ ಚಿತ್ರದ ಟೀಸರ್ ಮತ್ತು ಚಿತ್ರ ಬಿಡುಗಡೆ ಎರಡಕ್ಕೂ ಈಗ ತಾಂತ್ರಿಕ ಅಡಚಣೆ ಎದುರಾಗಿದೆ..

ಹಾಗೆಂದು ಚಿತ್ರತಂಡವೇ ಹೇಳಿಕೊಂಡಿದೆ. ಶುಕ್ರವಾರ ಮಹತ್ವದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಆಶಯಗಳನ್ನು ಹೇಳುವ ಪ್ರಯತ್ನದಲ್ಲಿದ್ದ ಚಿತ್ರತಂಡವೀಗ ತಾಂತ್ರಿಕ ಕಾರಣ ನೀಡಿ ಚಿತ್ರದ ಬಿಡುಗಡೆಯನ್ನೂ ಮುಂದೂಡಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ‘ಬುದ್ಧಿವಂತ-2’ ಚಿತ್ರವನ್ನು ಸೆಪ್ಟೆಂಬರ್ 15ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.

ಸೆಪ್ಟೆಂಬರ್ 18 ಉಪ್ಪಿ ಅವರ ಹುಟ್ಟುಹಬ್ಬವಾಗಿದ್ದು, ಅದಕ್ಕೂ ಎರಡು ದಿನ ಮುಂಚೆಯೇ ಚಿತ್ರವು ಬಿಡುಗಡೆಗೆ ಸಜ್ಜಾಗಿತ್ತು.

ವಿಡಿಯೋ ತುಣುಕೊಂದರ(ಗ್ಲಿಂಪ್ಸ್) ಮೂಲಕವೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಈಚೆಗೆ ಘೋಷಣೆ ಮಾಡಿಕೊಂಡಿತ್ತು.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರಿಸ್ಟಲ್ ಪಾರ್ಕ್ ನಿರ್ಮಾಣ ಸಂಸ್ಥೆ ಟೀಸರ್ ಹಾಗೂ ಚಿತ್ರದ ಬಿಡುಗಡೆ ಮುಂದೂಡಿಕೆ ವಿಷಯವನ್ನು ಪ್ರಕಟಣೆ ಮೂಲಕ ತಿಳಿಸಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *