ಜಗಮಗಿಸುವ ಬೆಳಕಿನ ನಡುವೆ ಸ್ಟಾರ್ ಹೊಟೇಲ್ ನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಹಳೆಯ ದಿನಗಳ ಮೆಲುಕು ಹೆಚ್ಚಾಗಿ ಕಂಡಿತು..
ಅದು ಸಂಜು ವೆಡ್ಸ್ ಗೀತಾ-2 ..!
ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಚಿತ್ರ ಸೂಪರ್ ಹಿಟ್ ಆಗಿ ದಾಖಲೆ ಬರೆದಿರುವುದು ಇತಿಹಾಸ. ಈಗ ಅದರದೇ ಮುಂದುವರೆದ ಭಾಗವೂ ಅದೇ ರೀತಿಯಲ್ಲಿ ಆಗಲಿ ಎಂಬುದು ಚಿತ್ರತಂಡದ ಆಶಯ.
ಹಾಗಾಗಿ ‘ಸಂಜು ವೆಡ್ಸ್ ಗೀತಾ-2’ ಸ್ವಿಟ್ಜರ್ಲೆಂಡ್ ನಲ್ಲಿ ಹಾಡುಗಳ ಚಿತ್ರೀಕರಣ ಮುಗಿಸಿ ಬಂದಿದ್ದು, ಅದರ ವಿವರ ನೀಡಲು ಸ್ಟಾರ್ ಹೊಟೇಲ್ ವಿಶಾಲ ಆವರಣದಲ್ಲಿ ಮಾಧ್ಯಮಗಳ ಮುಂದೆ ಬಂದಿತ್ತು.
ಮುಖ್ಯ ಪಾತ್ರದಲ್ಲಿರುವ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಅಲ್ಲದೆ ರಂಗಾಯಣ ರಘು, ಎಸ್.ಮಹೇಂದರ್ ಹಾಗೂ ನ ಟ ಶರಣ್ ಚಿತ್ರ ಮತ್ತು ನಾಗ್ ಶೇಖರ್ ಬೆಳವಣಿಗೆಯ ಬಗ್ಗೆ ಮಾತನಾಡಿದರು.
‘ನಿನಗಾಗಿ’ ಚಿತ್ರದಲ್ಲಿ ನಾಗ್ ಶೇಖರ್ ಅವರಿಂದ ಚಿಕ್ಕ ಪಾತ್ರ ಮಾಡಿಸಿದ್ದ ಅನುಭವ ಮತ್ತು ಶಿಷ್ಯನಾಗಿ ಬಾಗ್ ಶೇಖರ್ ಬೆಳೆದ ಕಥೆಯನ್ನು ವಿವರಿಸಿದರು ಎಸ್.ಮಹೇಂದರ್.
ಸ್ವಿಟ್ಜರ್ಲೆಂಡ್ ನಲ್ಲಿ ಎರಡು ಹಾಡುಗಳ ಅದ್ದೂರಿ ಶೂಟಿಂಗ್ ಮುಗಿಸಿರುವ ತಂಡ ಅದರ ಚಿತ್ರೀಕರಣ ಸಂದರ್ಭಗಳನ್ನು ವಿವರಿಸಿತು. ಅಲ್ಲದೆ ಮುಂಬಯಿ, ಹೈದರಾಬಾದ್ ಗಳಲ್ಲಿ ಚಿತ್ರೀಕರಣ ಮುಗಿಸಿ 2024ರ ಏಪ್ರಿಲ್ 1ರಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಪ್ರಕಟಿಸಿದರು ನಾಗ್ ಶೇಖರ್.
ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ ಭಾಗ ಎರಡು ಇಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್ ಮೆಟ್ ಛಲವಾದಿ ಕುಮಾರ್ ಕೈಜೋಡಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅದ್ಭುತವಾದ ಟ್ಯೂನ್ ಗಳನ್ನು ಮಾಡಿ ಕೊಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಇಬ್ಬರೂ ಅದ್ಭುತ ಅಭಿನಯ ನೀಡಿದ್ದಾರೆ ಎಂದರು.
ಸ್ವಿಟ್ಜರ್ಲೆಂಡ್ ನ ಕೊರೆಯುವ ಚಳಿಯಲ್ಲಿ ಕಷ್ಟ ವಾದರೂ ಚಿತ್ರದ ಆಶಯಗಳು ಉತ್ತಮವಾಗಿವೆ ಎಂದರು ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್.
ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ್ 5 ಸುಂದರ ಹಾಡುಗಳಿಗೆ ಸಂಗೀತ ನೀಡಿದ್ದು, ಕವಿರಾಜ ಸಾಹಿತ್ಯ ಸಾಹಿತ್ಯ ಬರೆದಿದ್ದಾರೆ.
ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.