Snehapriya.com

June 8, 2025

ಕಬ್ಜ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

Social Share :

* ಮಾರ್ಚ್ 4ಕ್ಕೆ ಟ್ರೈಲರ್ ಬಿಡುಗಡೆ

* ನಮಾಮಿ ನಮಾಮಿ ಹಾಡಿನ ಯಶಸ್ಸು

* ದೊಡ್ಡ ಮಟ್ಟದ ವ್ಯಾಪಾರ

* ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ

* ಕರ್ನಾಟಕದಲ್ಲೇ ದೊಡ್ಡ ಮಟ್ಟದ ವ್ಯಾಪಾರ

* ಆರ್.ಚಂದ್ರು ಮೂರು ವರ್ಷಗಳ ಪರಿಶ್ರಮದ ಬೆಲೆ

ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕಬ್ಜ’ ಚಿತ್ರದ ವಿವರ ಬಿಚ್ಚಿಕೊಳ್ಳಲು ಅಂದರೆ ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಜನಪ್ರಿಯವಾಗಿವೆ.

ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಗೆ ಪ್ರಪಂಚದಾದ್ಯಂತ ತೀವ್ರ ಕುತೂಹಲ ಉಂಟಾಗಿತ್ತು. ಇದೀಗ ಮಾರ್ಚ್ 4ರ ಸಂಜೆ 5 ಗಂಟೆಗೆ ಬಿಡುಗಡೆ ಕಾಣುತ್ತಿದೆ. ಆ ಮೂಲಕ ಅಭಿಮಾನಿಗಳ ಕುತೂಹಲ ತಣಿಸುತ್ತಿದೆ.

ಮಾರ್ಚ್ 4ರ ಸಂಜೆ ಆನಂದ್ ಆಡಿಯೋ ಮೂಲಕ ಎಲ್ಲಾ ಭಾಷೆಗಳಲ್ಲಿಯೂ ಈ ಟ್ರೈಲರ್ ಬಿಡುಗಡೆ ಕಾಣಲಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.

ಚಿತ್ರದ ಬಾಲಿವುಡ್ ಹಕ್ಕುಗಳನ್ನು ಆನಂದ್ ಪಂಡಿತ್ ಸಂಸ್ಥೆ ಪಡೆದಿದ್ದು, ಮುಂಬೈನಲ್ಲಿ ಸುಮಾರ್ ಎರಡು ಸಾವಿರ ಪರದೆಗಳಲ್ಲಿ ಈ ಚಿತ್ರ ಬಿಡುಗಡೆ ಕಾಣುವುದೆಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚಿನ ಬೆಲೆಗೆ ಚಿತ್ರವನ್ನು ಕೊಂಡುಕೊಳ್ಳಲು ದೊಡ್ಡ ವಿತರಣಾ ಸಂಸ್ಥೆ ಮುಂದಾಗಿದ್ದು, ಮಾತುಕತೆ ಸಹ ಮುಂದುವರೆದಿದೆ.

ಈ ಮಧ್ಯ ಈಚೆಗೆ ಶಿಡ್ಲಘಟ್ಟದ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಹಾಡು ‘ಚುಮು ಚುಮು ಚಳಿಯಲಿ..’ ಹಾಡು ಕೇವಲ ಎರಡು ದಿನಕ್ಕೆ 12 ಮಿಲಿಯನ್ ಪ್ರೇಕ್ಷಕರನ್ನು ತಲುಪಿ ಮುಂದುವರೆದಿದೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *