Snehapriya.com

June 8, 2025

ರಿಸ್ಕ್ ಸವಾಲುಗಳನ್ನು ಎದುರಿಸುತ್ತದೆ ಲಾಠಿ ಚಾರ್ಜ್ ಬಗ್ಗೆ ವಿಶಾಲ್ ಮಾತು

Social Share :

ದಕ್ಷಿಣ ಭಾರತದ ಹೆಸರಾಂತ ಸ್ಟಾರ್ ನಟ ಎದುರಿಸುವ ತೊಂದರೆಗಳಿಗೆ ಲೆಕ್ಕವೇ ಇಲ್ಲ. ಈಚೆಗೆ ಸಾಹಸ ಮಾಡಲು ಹೋದಾಗ ಬಿದ್ದು ಎಡವಟ್ಟು ಮಾಡಿಕೊಂಡರು.. ಅದು ಒಮ್ಮೆಯಲ್ಲ; ಹಲವಾರು ಬಾರಿ..

ಅವರು ವಿಶಾಲ್..!

ಡ್ಯೂಪ್ ಬಳಸದೇ ಸಾಹಸ ಮಾಡುವ ರಿಸ್ಕ್ ಎದುರು ಹಾಕಿಕೊಳ್ಳುವ ವಿರಳ ಸ್ಟಾರ್ ನಟರಲ್ಲಿ ಇವರು ಮುಂಚೂಣಿಯಲ್ಲಿ ನಿಲ್ಲಬಲ್ಲರು..

ವಿಶಾಲ್ ಅಪರೂಪಕ್ಕೆ ಬೆಂಗಳೂರು ಮಾಧ್ಯಮಗಳ ಮುಂದೆ ಬಂದಿದ್ದರು. ಅದೂ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಲಾಠಿ ಚಾರ್ಜ್’ ಚಿತ್ರದ ಪ್ರಚಾರದ ಸಲುವಾಗಿ..

ಈ ವೇಳೆ ಅವರು ಮಾಡುವ ಸಾಹಸ ಅದರಿಂದ ಉಂಟಾಗುವ ತೊಂದರೆಗಳ ಬಗ್ಗೆಯೇ ಮೊದಲ ಪ್ರಶ್ನೆ ಎದುರಾಯಿತು ಅವರಿಗೆ..

ಹೌದು ಸರ್ ಬದುಕಿನಲ್ಲಿ ರಿಸ್ಕ್ ಬೇಕು.. ನಾನು ಈಗ ಮೈ ಪೂರ ಗಾಯ ಮಾಡಿಕೊಂಡಿರುವೆ.. ಅದು ನೋವು ಸಂಕಟ ಎಲ್ಲವನ್ನೂ ನೀಡಿದೆ. ಆದರೆ ನಾಳೆ ಅಭಿಮಾನಿಗಳು ನನ್ನ ಚಿತ್ರ ನೋಡಿ ಶಿಳ್ಳೆ ಹೊಡೆಯುವಾಗ ಎಲ್ಲವೂ ಮರೆತು ಹೋಗುತ್ತದೆ ಎಂದು ನಕ್ಕರು.

ಲಾಠಿ ಕೆಳ ಹಂತದ ಪೊಲೀಸ್ ಕಾನ್ಸ್ ಟೇಬಲ್ ಹಿಡಿಯುವ ಆಯುಧ. ಚಿತ್ರದಲ್ಲಿ ನನ್ನ ಪಾತ್ರ ಕೂಡ ಅದೇ. ಈ ರೀತಿ ಪೊಲೀಸ್ ಕಾನ್ಸ್ ಡೇಬಲ್ ಗಳ ಚಿತ್ರಗಳು ಕಡಿಮೆ ಬಂದಿವೆ
ಆದರೆ ಈ ರೀತಿಯ ಸಾಹಸ ಮಾಡುವ ಚಿತ್ರಗಳು ಬಂದೇ ಇಲ್ಲ ಎಂದು ಹೇಳಬಹುದು ಎಂದು ಹೇಳುತ್ತಾ ಹೋದರು ವಿಶಾಲ್.

ಉನ್ನತ ಅಧಿಕಾರಿ ಮತ್ತು ಅಧಿಕಾರಿಗಳು ಪ್ರಶಂಸೆಗೆ ಒಳಪಡುತ್ತಲೇ ಇರುತ್ತಾರೆ. ಆದರೆ ಒಂದು ದೂರು ಬಂದ ತಕ್ಷಣ ಓಡಿ ಬರುವ ಪೊಲೀಸರ ಗೋಳು ಚಿಂತನೆ, ಮಿತಿ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ ಎಂದರು.

ಸಮಾಜ ಸೇವೆ ನಿಲ್ಲುವುದಿಲ್ಲ..

ನನಗೆ ಅಪರೂಪದ ಅವಕಾಶ ಎಂದರೆ ಸಮಾಜ ಸೇವೆ. ಅದು ಎಂದಿಗೂ ನಿಲ್ಲುವುದಿಲ್ಲ. ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನನಗಾಗಿ ಐದು ಸೀಟುಗಳನ್ನು ಮೀಸಲಿರಿಸಿ ಐವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದುಡಿಯಲು ಅವಕಾಶ ಕಲ್ಪಿಸಿಕೊಟ್ಟಿರುವುದು ಪುಣ್ಯ.

ಶಕ್ತಿಧಾಮದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವೆ, ಅಣ್ಣಾ ಶಿವಣ್ಣ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದರು ವಿಶಾಲ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *