Snehapriya.com

June 8, 2025

ಓ ಮೈ ಲವ್ ಮನರಂಜನಾತ್ಮಕ ಚಿತ್ರ ಮಗನ ಚಿತ್ರಕ್ಕೆ ಶಶಿಕುಮಾರ್ ಬೆಂಬಲ

Social Share :

ಕನ್ನಡದ ಸುಪ್ರೀಂಹೀರೋ ಎಂದೇ ಖ್ಯಾತರಾಗಿರುವ ಶಶಿಕುಮಾರ್ ಈಗ ತಮ್ಮ ಪುತ್ರ ಅಕ್ಷಿತ್ ಬೆನ್ನ ಹಿಂದೆ ನಿಂತಿದ್ದಾರೆ. ಅಕ್ಷಿತ್ ಶಶಿಕುಮಾರ್ ಈಗಾಗಲೇ ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗಾಗಲೇ ಚಿತ್ರೀಕರಣ ಮುಗಿಸಿರುವಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಚಿತ್ರ ಮೊದಲಿಗೆ ಬಿಡುಗಡೆ ಕಾಣಲು ಸಜ್ಜಾಗಿದೆ.

ಚಿತ್ರೀಕರಣ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡದ ಜೊತೆಗೆ ಶಶಿಕುಮಾರ್ ಸಹ ಸೇರಿಕೊಂಡಿದ್ದರು. ಇದು ನನ್ನ ಮಗನ ಚಿತ್ರ ಎಂಬುದು ನಿಜವೇ ಇರಬಹುದು. ಆದರೆ ನಾನು ಒಂದು ದಿನವೂ ಚಿತ್ರೀಕರಣಕ್ಕೆ ಹೋಗಲಿಲ್ಲ. ಏಕೆಂದರೆ ಅವನು ಸ್ವತಂತ್ರವಾಗಿ ಬೆಳೆಯಬೇಕು. ನನ್ನ ಮಗ ಎಂಬುದು ಉದ್ಯಮದಲ್ಲಿ ಹೆಸರು ಇದ್ದೇ ಇರುತ್ತದೆ. ಆದರೆ ಇಂದಿನ ಪೀಳಿಗೆಯ ಹುಡುಗರಿಗೆ ಅವರದೇ ಸ್ವತಂತ್ರ ಇರಬೇಕು. ಅದಕ್ಕಾಗಿ ನಾನು ಯಾವ ಮಾರ್ಗದರ್ಶನ ನೀಡಿಲ್ಲ. ಬದಲಿಗೆ ಶಿಸ್ತು ಕಾಪಾಡಬೇಕು; ಯಾರನ್ನೂ ನೋಯಿಸಬಾರದು ಎಂಬುದನ್ನು ಹೇಳಿಕೊಟ್ಟಿರುವೆ ಎಂದರು ಶಶಿಕುಮಾರ್.

ನಿರ್ದೇಶಕ ಸ್ಮೈಲ್ ಶ್ರೀನು ಶಶಿಕುಮಾರ್ ಸಹಕಾರ ನೆನೆದರು ಮತ್ತು ಅಕ್ಷಿತ್ ವಿನಯವಂತ ಹೇಳಿದಂತೆ ಮಾಡುವ ನಿರ್ದೇಶಕರ ನಟ ಎಂಬುದನ್ನು ಒತ್ತಿ ಹೇಳಿದರು.

ಮುಖ್ಯ ಪಾತ್ರದಲ್ಲಿರುವ ಅಕ್ಷಿತ್ ಹಾಗೂ ಕೀರ್ತಿ ಕಲ್ಕೆರೆ ತಮ್ಮ ಪಾತ್ರಗಳ ಬಗ್ಗೆ ಹೇಳುತ್ತಲೇ ಚಿತ್ರತಂಡದ ಸಹಕಾರವನ್ನು ಕೊಂಡಾಡಿದರು. ಬಳ್ಳಾರಿಯ ಗಣಿ ಉದ್ಯಮಿ ಜಿ. ರಾಮಾಂಜಿನಿ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂಬ ವಿವರಗಳನ್ನು ನಿರ್ಮಾಪಕರೇ ಕೊಟ್ಟರು.

ಚಿತ್ರಕ್ಕೆ ಗೋವಾ ಹಾಗೂ ಉತ್ತರ ಭಾರತದ ಕಡೆ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅತಿ ಹೆಚ್ಚು ಲೊಕೇಶನ್ ಗಳಲ್ಲಿ ಚಿತ್ರೀಕರಣಗೊಂಡಿರುವ ಲವ್‍ಸ್ಟೋರಿ ಇದಾಗಿದ್ದು, ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್‍ಗಳೂ ಈ ಚಿತ್ರದ ಹೈಲೈಟ್ ಆಗಿದೆ.
ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‍ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ವಿವರ ಕೊಟ್ಟರು ನಿರ್ದೇಶಕರು.

ಚರಣ್ ಅರ್ಜುನ್ ಸಂಗೀತ, ಹಾಲೇಶ್ ಎಸ್. ಛಾಯಾಗ್ರಹಣ, ರಿಯಲ್ ಸತೀಶ್ ಸಾಹಸ, ವಿ.ಮುರಳಿ ನೃತ್ಯ ನಿರ್ದೇಶನ, ಡಿ.ಮಲ್ಲಿ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ. ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಹಾಗೂ ಇತರರು ಈ ಚಿತ್ರದ ಇತರ ತಾರಾ ಬಳಗದಲ್ಲಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *