Snehapriya.com

June 8, 2025

ಪ್ರೀತಿ ಪ್ರೇಮದ ಸೊಗಸು ಸಾರುವ ರೌಡಿ ಬೇಬಿ ಫೆ.11ಕ್ಕೆ ಬಿಡುಗಡೆ

Social Share :

ರೌಡಿ ಬೇಬಿ ಎಂಬುದು ಚಿತ್ರದ ಹೆಸರು. ಆದರೆ ಇದರಲ್ಲಿ ಸೊಗಸಾದ ಪ್ರೇಮಕಥೆ ಇದೆ. ಹಾಗೆಂದು ವಿವರಗಳನ್ನು ಬಿಚ್ಚಿಟ್ಟರು ನಿರ್ದೇಶಕ ಕಷ್ಣ. ಪ್ರೇಮ ಮತ್ತು ಬ್ರೇಕ್ ಅಪ್ ಈ ದಿನಗಳಲ್ಲಿ ಸಹಜವಾಗಿದೆ. ಹಾಗೆಯೇ ಮೊದಲ ಪ್ರೀತಿ ಮರೆಯಲಾಗದ ನೆನಪುಗಳನ್ನು ತುಂಬಿಕೊಡುತ್ತದೆ. ಚಿತ್ರದಲ್ಲಿ ಅದನ್ನು ತರುವ ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡರು ನಿರ್ದೇಶಕರು.

ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.


ಸುಮುಖ ಎಂಟರ್ ಟೈನರ್ ನಡಿ ವಾರ್ ಫುಟ್ ಸ್ಟುಡಿಯೋ ನಿರ್ಮಾಣದ ‘ರೌಡಿ ಬೇಬಿ’ ಇದೇ ಹನ್ನೊಂದರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ನಡೆದ ಸುದ್ದಿ ಗೋಷ್ಠಿ ಯಲ್ಲಿ ಚಿತ್ರತಂಡ ಉತ್ಸಾಹದಿಂದ ಪಾಲ್ಗೊಂಡಿತ್ತು.
ಸಂಜಯ್ ಗೌಡ, ರಘು ಗೌಡ, ವಿತರಕ ಮಾರ್ಸ್ ಸುರೇಶ್ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎಸ್.ಎಸ್.ರವಿಗೌಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಎದುರು ದಿವ್ಯ ಸುರೇಶ್ ಪಾತ್ರ ಮಾಡಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳಿದಷ್ಟೇ ಚೆನ್ನಾಗಿ ಸಿನಿಮಾವನ್ನು ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು ರವಿಗೌಡ.

ಚಿತ್ರದ ಹೆಸರಿನಂತೆ ರೌಡಿ ಬೇಬಿಯ ಪಾತ್ರ ನನ್ನದು ಎಂಬುದು ದಿವ್ಯ ಸುರೇಶ್ ವಿವರಣೆ. ಕಾಲೇಜಿನಲ್ಲಿ ಒಂದು ಕೀಟಲೇ ಗ್ಯಾಂಗ್ ಇರುತ್ತದೆ ಅದರ ಮುಖ್ಯಸ್ಥೆ ನಾನೇ ಆಗಿರುತ್ತೇನೆ ಎಂದು ಹೇಳಿಕೊಂಡರು.

ನಾಯಕ ನಟರಾಗಿ ಬಡ್ತಿ ಪಡೆದಿರುವ ಕೆಂಪೇಗೌಡರಿಗೆ ಈ ಚಿತ್ರದಲ್ಲಿ ವಿಶೇಷ ಪಾತ್ರವಿದೆಯಂತೆ..!

ಹಾಸ್ಯ ನಟ ಅಮಿತ್, ಸಂಗೀತ ನಿರ್ದೇಶಕರಾದ ಅರ್ಮಾನ್ ಹಾಗೂ ಅಭಿಷೇಕ್ ಚಿತ್ರದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು.

ರವಿಗೌಡ ಅವರ ಸಹೋದರ ರಘುಗೌಡ ಸಹ ಇದೇ ಸಂದರ್ಭದಲ್ಲಿ ಚಿತ್ರಕ್ಕೆ ಶುಭ ಹಾರೈಸಿದರು. ಗೀತರಚನಕಾರ ಕಿನಾಳ್ ರಾಜ್, ವಿತರಕ ನವರಸನ್ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *