Snehapriya.com

June 7, 2025

ರಕ್ತಾಕ್ಷ ಹೊಸ ಟೀಸರ್ ಬಿಡುಗಡೆ

Social Share :

ನೋಡುಗರ ಎದೆ ಝಲ್ ಎನಿಸುವಷ್ಟು ಇದು ಭಯಾನಕ. ಹೊಡೆದಾಟದ ಪರಂಪರೆ ಇಲ್ಲಿ ವಿನೂತನ..

ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಟೀಸರ್ ಅಬ್ಬಾ ಯಾವ ಚಿತ್ರದ್ದು ಎಂಬ ಕುತೂಹಲ ಹುಟ್ಟುಹಾಕಿದೆ.

ಅದು ರಕ್ತಾಕ್ಷ..!

ಇನ್ನೇನು ಬಿಡುಗಡೆಗೆ ಸಿದ್ಧಗೊಂಡಿರುವ ನವ ಪ್ರತಿಭೆ ರೋಹಿತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಗಮನಾರ್ಹ ಅಂಶಗಳು ಬಹಳಷ್ಟಿವೆ.

ಪ್ರಮೋದ್ ಶೆಟ್ಟಿ ಮತ್ತು ರೂಪದರ್ಶಿ ರೋಹಿತ್ ಅವರ ಹೊಡೆದಾಟದ ಜೊತೆಗೆ ಕುತೂಹಲಕಾರಿ ಅಂಶಗಳನ್ನು ಈ ಟೀಸರ್ ಒಳಗೊಂಡಿದೆ.

ರಕ್ತಾಕ್ಷ ಯುವ ಪ್ರತಿಭೆಗಳ ವಿಸ್ಮಯ ರೂಪ ಹೊಂದಿರುವ ಚಿತ್ರ. ಈಗಾಗಲೇ ಕುತೂಹಲವನ್ನು ಹುಟ್ಟು ಹಾಕಿರುವ ಈ ಚಿತ್ರದ ತಾರಾಗಣವೂ ರೂಪದರ್ಶಿಗಳಿಂದ ತುಂಬಿ ಹೋಗಿದೆ.

ಚಿತ್ರ ಬಿಡುಗಡೆಗೆ ಮುಂಚೆಯೇ ನಟ ರೋಹಿತ್ ಕನ್ನಡದ ಸಲ್ಮಾನ್ ಖಾನ್ ಎಂದು ಕರೆಸಿಕೊಂಡು ಸುದ್ದಿಯಾಗಿದ್ದಾರೆ.

ಮಾಡೆಲ್ ಆಗಿ ಕಾರ್ಯ ನಿರ್ವಹಿಸುತ್ತಲೇ ಚಿತ್ರದ ಹೀರೋ ಆಗುವ ಕನಸು ಕಂಡ ಹುಡುಗ ಮುಂದೆ ನಿರ್ಮಾಪಕನಾಗಿ ಗುರುತಿಸಿಕೊಂಡಿರುವುದು ಅಚ್ಚರಿ.

ಅಸಾಮಾನ್ಯ ಛಲ ಮತ್ತು ಧೈರ್ಯ ಹೊಂದಿರುವ ಹುಡುಗ ರೋಹಿತ್ ಚಿತ್ರದ ಬಿಡುಗಡೆಯನ್ನೂ ವಿಶೇಷ ರೀತಿಯಲ್ಲೇ ಮಾಡಬೇಕು ಎಂಬ ಚಿಂತನೆಯಲ್ಲಿ ವಿನೂತನ ಐಡಿಯಾಗಳನ್ನು ಅರಸುತ್ತಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿರುವ ‘ರಕ್ತಾಕ್ಷ’ ಚಿತ್ರದ ಸುತ್ತ ಸಾಕಷ್ಟು ಕುತೂಹಲದ ವಿಷಯಗಳಿವೆ. ನಕಾರಾತ್ಮಕ ಶಕ್ತಿಯನ್ನು ಪ್ರೇರಣಾ ಶಕ್ತಿಯಾಗಿ ಪರಿವರ್ತಿಸುವ ಅಪರೂಪದ ವಿಷಯಗಳ ಸುತ್ತ ಈ ಚಿತ್ರದ ಕಥೆ ಇದೆ.

ತಾಂತ್ರಿಕ ಕೌಶಲ್ಯಗಳು ಚಿತ್ರವನ್ನು ಮೆರೆಸಬಲ್ಲವು ಎಂಬ ಆಶಾದಾಯಕ ನಿಲುವನ್ನು ಹೊಂದಿರುವ ರೋಹಿತ್ ಗೆ ಚಿತ್ರ ಮಾಡುವಾಗ ಎದುರಾದ ಕಷ್ಟಗಳು ಮರೆತು ಹೋಗಿವೆ.

ಮೂಲತಃ ರಾಜ್ಯದ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ಪ್ರತಿಭಾವಂತ ಹುಡುಗ ಈ ರೋಹಿತ್.

ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಎರಡು ವರ್ಷಗಳ ರಂಗಭೂಮಿ ತರಬೇತಿ ಪಡೆದ ಅನುಭವ ಅವರ ಬೆನ್ನಿಗಿದೆ. ಮಾಡೆಲಿಂಗ್ ಮೂಲಕವೇ ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಗೆ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವ ಇಲ್ಲಿ ವರವಾಗಿದೆ.

ಈಗ ಬಿಡುಗಡೆಗೊಂಡಿರುವ ಹೊಸ ಟೀಸರ್ ಚಿತ್ರದ ಹೊಸದಾದ ಆಶಯಗಳನ್ನು ಹೆಚ್ಚಿಸಿದೆ. ಜೊತೆಗೆ ರೋಹಿತ್ ಪ್ರತಿಭೆಯನ್ನು ಅನಾವರಣಗೊಳಿಸಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *