Snehapriya.com

June 9, 2025

ಕನ್ನಡದ ಸಲ್ಮಾನ್ ಖಾನ್ ಆಗುವ ಕನಸಿನಲ್ಲಿ ಮಾಡೆಲ್ ರೋಹಿತ್..

Social Share :

ರಕ್ತಾಕ್ಷ ಎಂಬ ಚಿತ್ರವೀಗ ಬಿಡುಗಡೆಗೆ ಸಿದ್ದವಿದೆ. ತಾಂತ್ರಿಕತೆಯ ವಿಸ್ಮಯ ರೂಪ ಹೊಂದಿರುವ ಚಿತ್ರ ಈಗಾಗಲೇ ಕುತೂಹಲವನ್ನು ಹುಟ್ಟು ಹಾಕಿದೆ..

ಆದರೆ ‘ರಕ್ತಾಕ್ಷ’ ಚಿತ್ರದ ಹೆಗ್ಗಳಿಕೆ ಇರುವುದು ಆ ಚಿತ್ರ ನಿರ್ಮಾಪಕ ಮತ್ತು ಮುಖ್ಯ ಪಾತ್ರದಲ್ಲಿ ನಟಿಸಿರುವ
ರೂಪದರ್ಶಿ ರೋಹಿತ್ ಶ್ರಮದಲ್ಲಿ..

ಮಾಡೆಲ್ ಆಗಿ ಕಾರ್ಯ ನಿರ್ವಹಿಸುತ್ತಲೇ ಚಿತ್ರದ ಹೀರೋ ಆಗುವ ಕನಸು ಕಂಡ ಹುಡುಗ ಮುಂದೆ ನಿರ್ಮಾಪಕನಾಗಿ ನಿಲ್ಲುವುದು ಅಚ್ಚರಿ.

ಅಸಾಮಾನ್ಯ ಛಲ ಮತ್ತು ಧೈರ್ಯ ಈ ಕಾರ್ಯಕ್ಕೆ ಪ್ರೇರೇಪಿಸಿತು ಎಂಬುದು ನಿಜವೇ ಆದರೂ ಸಿನಿಮಾ ಕ್ಷೇತ್ರದ ಆಗು ಹೋಗುಗಳ ಜೊತೆ ಸೆಣೆಸಿ ಗೆಲುವಿನ ಹಂತಕ್ಕೆ ಬಂದಿರುವ ಈ ಹುಡುಗನ ಶ್ರಮ ವರ್ಣನೆಗೆ ನಿಲುಕದ್ದು..

ಮಾಡೆಲ್ ಆಗಿ ದೇಹ ಹುರಿಗೊಳಿಸುವಾಗಲೇ ಕನ್ನಡದ ಸಲ್ಮಾನ್ ಖಾನ್ ಎಂದು ಸ್ನೇಹಿತರು ಕೊಟ್ಟ ಬಿರುದು ಮತ್ತಷ್ಟು ಪ್ರೇರಣೆ ಯಾಯಿತು. ಇದೀಗ ರೋಹಿತ್ ಕನಸು ಅದೇ ಆಗಿದೆ.

ಸದ್ಯವೇ ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿರುವ ‘ರಕ್ತಾಕ್ಷ’ ಚಿತ್ರದ ಸುತ್ತ ಸಾಕಷ್ಟು ಕುತೂಹಲದ ವಿಷಯಗಳಿವೆ. ನಕಾರಾತ್ಮಕ ಶಕ್ತಿಯನ್ನು ಪ್ರೇರಣಾ ಶಕ್ತಿಯಾಗಿ ಪರಿವರ್ತಿಸುವ ಅಪರೂಪದ ವಿಷಯಗಳ ಸುತ್ತ ಈ ಚಿತ್ರದ ಕಥೆ ಇದೆ.

ಕಥೆ ಮತ್ತು ತಾಂತ್ರಿಕ ಕೌಶಲ್ಯಗಳು ಚಿತ್ರವನ್ನು ಮೆರೆಸಬಲ್ಲವು ಎಂಬ ಆಶಾದಾಯಕ ನಿಲುವನ್ನು ಹೊಂದಿರುವ ರೋಹಿತ್ ಗೆ ಚಿತ್ರ ಮಾಡುವಾಗ ಎದುರಾದ ಕಷ್ಟಗಳು ಮರೆತು ಹೋಗಿವೆ.

ಮೂಲತಃ ರಾಜ್ಯದ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ಪ್ರತಿಭಾವಂತ ಹುಡುಗ ಈ ರೋಹಿತ್.

ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಎರಡು ವರ್ಷಗಳ ರಂಗಭೂಮಿ ತರಬೇತಿ ಪಡೆದ ಅನುಭವ ರೋಹಿತ್ ಬೆನ್ನಿಗಿದೆ. ಮಾಡೆಲಿಂಗ್ ಮೂಲಕವೇ ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಗೆ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವ ಇಲ್ಲಿ ವರವಾಗಿದೆ.

ಜೊತೆಗೆ ಯುವನಟ ರೋಹಿತ್ ಬೆಂಬಲಿಸುವ ಸ್ನೇಹಪಡೆ ಅವರ ಜೊತೆಗಿದ್ದು ಸಹಕರಿಸುತ್ತಿದೆ. ರೋಹಿತ್ ಕನ್ನಡದ ಪ್ರಖ್ಯಾತ ನಟ ಆಗಬೇಕು ಎಂಬುದು ಅವರ ಸ್ನೇಹ ವಲಯದ ಕನಸಾಗಿದೆ.

ರಕ್ತಾಕ್ಷ ಚಿತ್ರದ ಮತ್ತೊಂದು ಟೀಸರ್ ಸದ್ಯವೇ ಬಿಡುಗಡೆ ಕಾಣುತ್ತಿದ್ದು, ಅದರ ಹೊಳವುಗಳು ಚಿತ್ರದ ಒಟ್ಟಾರೆ ಆಶಯಗಳನ್ನು ತಿಳಿಸಿ ಕೊಡಲಿವೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *