ಮಾಡೆಲ್ ಪ್ರಪಂಚದಿಂದ ಬಂದ ಉತ್ತರ ಕರ್ನಾಟಕ ಮೂಲದ ಯುವ ಪ್ರತಿಭೆ ರೋಹಿತ್ ನಿರ್ಮಿಸಿ ನಟಿಸಿರುವ ‘ರಕ್ತಾಕ್ಷ’ ಈಗ ಯುವ ಜನರ ಹಾಟ್ ಫೇವರಿಟ್ ಆಗುತ್ತಿದೆ..
ಮುಖ್ಯವಾಗಿ ಇದು ಯುವ ಜನರ ಧ್ವನಿಯಾಗಲಿದೆ; ಏಕೆಂದರೆ ಯುವ ಸಮೂಹ ಅತ್ಯಂತ ಉತ್ಸಾಹದಲ್ಲಿ ಮಿಂದೆದ್ದು ಮಾಡಿರುವ ಸಿನಿಮಾ..
ಕಳೆದ ತಿಂಗಳು ಬಿಡುಗಡೆಯಾದ ಜವಾರಿ ಹಾಡು ಯುವಕರ ಹೃದಯ ಬಡಿತ ಹೆಚ್ಚಿಸಿದ್ದರೆ; ಚಿತ್ರದ ಸಾಹಸ ದೃಶ್ಯಗಳು ರೋಮಾಂಚಕ ಆಶಯದ ಜೊತೆ ಮೈ ನವೀರೇಳಿಸಿವೆ.
ಜವಾರಿ ಹಾಡು ಈಗ ಉತ್ತರ ಕರ್ನಾಟಕ ಭಾಗದ ಹುಡುಗರ ಬಾಯಿ ಚಾಕೋಲೇಟ್ ಆಗಿದೆ. ಈ ಹಿನ್ನೆಲೆಯಲ್ಲಿ ತಂಡ ಅತ್ಯಂತ ಉತ್ಸಾಹದಲ್ಲಿ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ಅವರ ಸಾಹಸ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ರೂಪದರ್ಶಿಯಾಗಿ ಹೆಸರು ಮಾಡಿರುವ ರೋಹಿತ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ವಿಶೇಷತೆಗಳು ಬಹಳಷ್ಟಿವೆ. ಅದರಲ್ಲಿ ಈಗ ಉತ್ತರ ಕರ್ನಾಟಕ ಭಾಗದ ‘ಜವಾರಿ ಹಾಡು’ ಸೇರಿಕೊಂಡಿದೆ ಎಂಬುದು ಚಿತ್ರಕ್ಕೆ ಹೆಚ್ಚುಗಾರಿಕೆ ವಿಷಯವಾಗಿದೆ.
ಈ ಹಿಂದೆ ಬಿಡುಗಡೆಗೊಂಡಿದ್ದ ಟೀಸರ್ ನಲ್ಲಿ ಪ್ರಮೋದ್ ಶೆಟ್ಟಿ ಮತ್ತು ರೋಹಿತ್ ಅವರ ಹೊಡೆದಾಟದ
ದೃಶ್ಯಗಳು ಮೈನವಿರೇಳಿಸುವ ಅಂಶಗಳನ್ನು ಹೊಂದಿದ್ದವು. ಅದೇ ಮಾದರಿಯ ಸ್ಟಿಲ್ ಗಳನ್ನು ಈಗ ಬಿಡುಗಡೆ ಮಾಡಲಾಗಿದೆ.
ರಕ್ತಾಕ್ಷ ಯುವ ಪ್ರತಿಭೆಗಳ ವಿಸ್ಮಯ ರೂಪ ಹೊಂದಿರುವ ಚಿತ್ರ. ಈಗಾಗಲೇ ಕುತೂಹಲವನ್ನು ಹುಟ್ಟು ಹಾಕಿರುವ ಈ ಚಿತ್ರದ ತಾರಾಗಣವೂ ರೂಪದರ್ಶಿಗಳಿಂದ ತುಂಬಿ ಹೋಗಿದೆ.
ಚಿತ್ರ ಬಿಡುಗಡೆಗೆ ಮುಂಚೆಯೇ ನಟ ರೋಹಿತ್ ಕನ್ನಡದ ಸಲ್ಮಾನ್ ಖಾನ್ ಎಂದು ಕರೆಸಿಕೊಂಡು ಸುದ್ದಿಯಾಗಿರುವುದು ವಿಶೇಷ.