ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರವು ಬಿಡುಗಡೆಯಾದ ಐದನೇ ದಿನವೂ ಗೆಲುವಿನ ಓಟವನ್ನು ಮುಂದುವರೆಸಿದೆ..
ಚಿತ್ರದ ಅಪೂರ್ವ ಆರಂಭದ ಗೆಲುವಿನಿಂದ ಅತೀವ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿರುವ ಚಿತ್ರತಂಡ ಸೋಮವಾರ ಮಾಧ್ಯಮಗಳ ಮುಂದೆ ಬಂದಿತ್ತು.
ಸ್ವತಃ ದರ್ಶನ್ ಚಿತ್ರದ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದರಲ್ಲದೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಗಳನ್ನೂ ನೀಡಿದರು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಕಿಶೋರ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ತಾರೆಯರಾದ ಶೃತಿ, ರವಿ ಚೇತನ್, ಅವಿನಾಶ್, ಕುಮಾರ್ ಗೋವಿಂದ್ ಹಾಗೂ ಇತರರು ಚಿತ್ರದ ಗೆಲುವಿನ ಖುಷಿಯಲ್ಲೇ ಮಾತನಾಡಿದರು.
ಚಿತ್ರದ ಗಳಿಕೆ ವಿಷಯದಲ್ಲಿ ಇಲ್ಲಿಯವರೆಗೂ ಬಂದಿರುವುದು ಸತ್ಯವೆಂದು ಹೇಳಲಾರೆ; ಆದರೆ ಉತ್ತಮ ಗಳಿಕೆಯ ದಾರಿಯಲ್ಲಿ ನಾವಿದ್ದೇವೆ ಎಂದು ಮಾತ್ರ ಹೇಳಬಹುದು ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.
ಮೂಲಗಳ ಪ್ರಕಾರ ಮೂರು ದಿನಗಳಿಗೆ ಕಾಟೇರ ಸುಮಾರು 50 ಕೋಟಿ ಗಳಿಕೆ ಮಾಡಿದೆ. ನೂರು ಕೋಟಿ ಕ್ಲಬ್ ನತ್ತ ಮುಂದಡಿ ಇಟ್ಟಿದೆ.
ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ದರ್ಶನ್ ಓರಿಯನ್ ಮಾಲ್ ನಲ್ಲಿ ಅಭಿಮಾನಿಗಳ ನಡುವೆ ವಿಜಯೋತ್ಸವ ಆಚರಿಸಿದ್ದು ವಿಶೇಷವಾಗಿತ್ತು.