ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ‘ಬೆನಕ ಗೋಲ್ಡ್ ಪ್ರೈ.ಲಿ.’ ಕಂಪನಿಗೆ ಚಂದನವನದ ಚೆಂದದ ನಟಿ ರೀಷ್ಮಾ ನಾಣಯ್ಯ ಈಗ ನೂತನ ಬ್ರಾಂಡ್ ಅಂಬಾಸಿಡರ್..
ಬೆನಕ ಗೋಲ್ಡ್ ನ ಸಿಇಓ ನಾಗರಾಜನ್.ಎಂ.ಕೆ ಈ ವಿಷಯ ಪ್ರಕಟಿಸಿದ್ದಾರೆ.
ಬೆನಕ ಗೋಲ್ಡ್ ಕಂಪನಿಯು ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದ್ದು, ಸ್ಟೋನ್ ವ್ಯಾಲ್ಯೂ ಚಿನ್ನದ ಜೊತೆ ಅದರ ಸ್ಟೋನ್ಗಳಿಗೂ ಕೂಡ ಬೆಲೆಯನ್ನು ಕೊಡುವುದು ಸೇರಿದಂತೆ ರೆಂಟ್ ಫಾರ್ ಗೋಲ್ಡ್ ಯೋಜನೆ ಮೂಲಕ ಚಿನ್ನವನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವ ಬದಲಿಗೆ ಅದನ್ನು ಬೆನಕ ಗೋಲ್ಡ್ಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸಬಹುದು ಎಂಬುದು ಗ್ರಾಹಕರಿಗೆ ಲಾಭದಾಯಕ ವಿಷಯವಾಗಿದೆ.
ಮೂರನೇ ಯೋಜನೆ ರೆಫರ್ ಅಂಡ್ ಅರ್ನ್ ಮೂಲಕ ಚಿನ್ನ ಬಿಡುಗಡೆ ಮಾಡಲು ಹುಡುಕುತ್ತಿರುವವರು ಪರಿಚಯ ವ್ಯಕ್ತಿಗಳನ್ನು ರೆಫರ್ ಮಾಡುವ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದು.
ನಾಲ್ಕನೇ ಯೋಜನೆಯಾದ ಡೋರ್ ಸ್ಟೆಪ್ ಸರ್ವಿಸ್ ಮೂಲಕ ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದು ಕಂಪನಿಯ ಪ್ರಮುಖ ಆದ್ಯತೆಯಾಗಿದೆ.
ಇದರ ಜತೆಗೆ ಹೊಸದಾಗಿ ರೂಪಿಸಕಾಗಿರುವ ಸೆಲ್ ಅಂಡ್ ಸೇವ್ ಮೂಲಕ ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆಯಾಗಿದೆ ಎಂಬುದು ಕಂಪನಿ ನೀಡಿರುವ ವಿವರವಾಗಿದೆ.
ಈ ಸಂಬಂಧ ಹೆಚ್ಚಿನ ವಿವರಗಳಿಗಾಗಿ www.benakagoldcompany.com ಅಥವಾ ಮೊ. 63 66 111 999 ಗೆ ಸಂಪರ್ಕಿಸಲು ಕೋರಲಾಗಿದೆ.