Snehapriya.com

June 9, 2025

ರಮೇಶ್ ರೆಡ್ಡಿ ಅರ್ಜುನ್ ಜನ್ಯ ಶಿವಣ್ಣ ಉಪೇಂದ್ರ ಜೊತೆಯಲಿ

Social Share :

ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಅವರ ಸೂರಜ್ ಪ್ರೊಡಕ್ಷನ್ ಈಗ ಕರ್ನಾಟಕದ ಮನೆ ಮಾತು.. ಏಕೆಂದರೆ ಅವರು ಉದಾರಿ ನಿರ್ಮಾಪಕ ಎಂಬುದು ಜನಜನಿತ. ಈಚೆಗೆ ‘ಗಾಳಿಪಟ2′ ಸಂದರ್ಭದಲ್ಲಿ ಅದು ನಿರೂಪಿತ ಗೊಂಡಿದೆ.

ಹೌದು ಸೂರಜ್ ಪ್ರೊಡಕ್ಷನ್ ಈಗ ಬಿಡುವಿರದೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಅದರಿಂದ ನಿರ್ಮಾಣವಾಗುತ್ತಿರುವ ಚಿತ್ರಗಳ ಪೈಕಿ ಬಹಳವಾಗಿ ಗಮನ ಸೆಳೆದಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ’45’ ಎಂಬ ಚಿತ್ರ.

ಇದು ಶಿವರಾಜ್ ಕುಮಾರ್ ಹಾಗೂ ಅರ್ಜುನ್ ಜನ್ಯ ಜೋಡಿಯ ಚಿತ್ರ ಎಂದೇ ಗುರುತಿಸಲಾಗಿತ್ತು. ಈಗ ಇವರ ಜೊತೆ ಸೂಪರ್ ಸ್ಟಾರ್ ಎಂಟ್ರಿಯಾಗಿದ್ದಾರೆ. ಅವರು ಉಪೇಂದ್ರ..!

ಶಿವಣ್ಣ ಹಾಗೂ ಉಪೇಂದ್ರ ಒಟ್ಟಿಗೆ ನಟಿಸುತ್ತಿರುವುದು ಮೊದಲೇನಲ್ಲ; ಈ ಮುಂಚೆ ‘ಪ್ರೀತ್ಸೆ’, ‘ಲವಕುಶ’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಈ ಜೋಡಿ ಒಂದಾಗಿರುವುದು ತೀವ್ರ ಕುತೂಹಲ ಹುಟ್ಟುಹಾಕಿದೆ. ಅಲ್ಲದೆ ಅರ್ಜುನ್ ಜನ್ಯ ಯಾವ ರೀತಿ ನಿಭಾಯಿಸುವರು ಎಂಬುದು ಮತ್ತೊಂದು ಕುತೂಹಲ.

ಮುಂದೆ ಡಿಸೆಂಬರ್ ನ ವೇಳೆಗೆ ಚಿತ್ರೀಕರಣ ಆರಂಭವಾಗಲಿರುವ ಚಿತ್ರಕ್ಕೆ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುವುದೆಂದು ಹೇಳಲಾಗಿದೆ. ಅರ್ಜುನ್ ಜನ್ಯ ಎಂದಿನಂತೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ.

ಬಹು ತಾರಾಗಣ ಹಾಗೂ ಬಹುಕೋಟಿ ವೆಚ್ಚದ ಈ ಸಿನಿಮಾ ಕನ್ನಡದ ಮತ್ತೊಂದು ದೊಡ್ಡ ಚಿತ್ರ ಎಂಬ ಗರಿ ಮೂಡಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಅದಕ್ಕೆ ಉದಾರ ಮನಸ್ಸಿನ ನಿರ್ಮಾಪಕರು ಇದ್ದಾರೆ ಎಂಬುದು ಬೇರೆ ಮಾತು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *