Snehapriya.com

June 8, 2025

ರಕ್ತಾಕ್ಷ ಮಾಸ್ ಟೀಸರ್ ಬಿಡುಗಡೆ..

Social Share :

ರೂಪದರ್ಶಿಯಾಗಿ ಬಹಳಷ್ಟು ಗಮನ ಸೆಳೆದಿರುವ ಯುವ ಪ್ರತಿಭೆ ರೋಹಿತ್ ಮುಖ್ಯ ಪಾತ್ರದಲ್ಲಿರುವ ‘ರಕ್ತಾಕ್ಷ’ ಹೊಸ ಟೀಸರ್ ಬಿಡುಗಡೆಗೊಂಡಿದೆ.

ದೇಹವನ್ನು ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ನ ಜೊತೆ ಕಾಣಿಸಿಕೊಂಡಿರುವ ರೋಹಿತ್ ಹೊಡೆದಾಟ ದೃಶ್ಯದಲ್ಲಿ ಪ್ರಮೋದ್ ಶೆಟ್ಟಿ ಎದುರು ಅಬ್ಬರಿಸಿದ್ದಾರೆ.

ಕಣ್ಣುಗಳು ಕೆಂಡದುಂಡೆ ದೇಹದಲ್ಲಿ ಗಾಯಗೊಂಡ ಹುಲಿಯ ವರಸೆ. ಎಂತಹವನ್ನು ಸದೆ ಬಡಿಯುವ ಆಕ್ರೋಶದಲ್ಲಿ ರೋಹಿತ್ ಕಾಣುವುದು ಚಿತ್ರರಂಗಕ್ಕೆ ಹೊಸ ಬಗೆಯ ನಾಯಕನ ಪ್ರವೇಶದ ಸೂಚನೆ ಕೊಟ್ಟಿದೆ.

ಅಂದ ಹಾಗೆ ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಟೀಸರ್ ಅಬ್ಬಾ ಯಾವ ಚಿತ್ರದ್ದು ಎಂಬ ಕುತೂಹಲ ಹುಟ್ಟುಹಾಕಿದೆ.

ಮಾಡೆಲಿಂಗ್ ಲೋಕದಲ್ಲಿ ನವ ನವೀನ ಛಾಪು ಮೂಡಿಸಿರುವ ರೋಹಿತ್ ರಕ್ತಾಕ್ಷ ಮೂಲಕ ನಟನಾಗಿ ಪ್ರತಿಭಾ ಸಾಮರ್ಥ್ಯ ಕ್ಕೆ ಮುಂದಾಗಿದ್ದಾರೆ.

ಸಾಯಿ ಪ್ರೊಡಕ್ಷನ್ ಹೌಸ್ ಹೆಸರಿನಲ್ಲಿ ರೋಹಿತ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿತ್ರವು ಸದ್ಯವೇ ತೆರೆ ಕಾಣಲಿದೆ.

ವಾಸುದೇವ ಎಸ್.ಎನ್ ಈ ಚಿತ್ರದ ನಿರ್ದೇಶಕ. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸಿನಿಮಾಗೆ ದುಡಿದಿದ್ದಾರೆ.

ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿರುವ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಪ್ರಮೋದಶೆಟ್ಟಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ವಸಿಷ್ಠ ಸಿಂಹ ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಬಿಡುಗಡೆಗೊಂಡಿರುವ ಎರಡನೇ ಟೀಸರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *