ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಹಾಗೂ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಸೈಡ್ ಬಿ ಮುಂದಿನ ವಾರ ಅಂದರೆ ನವೆಂಬರ್ 17ರಂದು ತೆರೆ ಕಾಣುತ್ತಿದೆ.
ಸೈಡ್ ಎ ನೋಡಿದವರಿಗೆ ಸೈಡ್ ಬಿ ಎಂಬುದು ಖಂಡಿತಾ ಕುತೂಹಲದ ವಿಷಯವಾಗಿರುತ್ತದೆ ಎಂಬ ಮಾಹಿತಿಗಳನ್ನು ನೀಡಿತು ಚಿತ್ರತಂಡ.
ರಮೇಶ್ ಇಂದಿರಾ, ಅದ್ವೈತ್,
ಉಲ್ಲಾಸ್, ಚೈತ್ರಾ,ರುಕ್ಮಿಣಿ ವಸಂತ್,
ಶ್ರೀನಿ ಶೆಟ್ಟಿ, ಜೈಪ್ರಿಯಾ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಸೈಡ್ ಎ ತಿಳಿ ನೀಲಿ ಬಣ್ಣವನ್ನು ಪ್ರತಿನಿಧಿಸಿದ್ದು ಗೊತ್ತೇ ಇದೆ. ಆದರೆ ಸೈಡ್ ಬಿ ಕೆಂಪು ಬಣ್ಣವನ್ನು ಪ್ರತಿನಿಧಿಸುತ್ತದೆ. ಇದು ಏಕೆ ಎಂಬುದು ಚಿತ್ರದಲ್ಲಿ ಕಾಣುತ್ತದೆ ಎಂದರು ನಿರ್ದೇಶಕ ಹೇಮಂತರಾವ್.
ಈ ಭಾಗದಲ್ಲಿ ಹಿಂಸೆಯ ವೈಭವೀಕರಣ ಇರಬಹುದೇ ಎಂಬುದಕ್ಕೆ ಖಂಡಿತಾ ಇಲ್ಲ ಎಂಬ ಉತ್ತರ ಬಂತು ಅವರಿಂದ. ನೈಜ ಸಂಗತಿಗಳನ್ನು ಹೇಳುವಾಗ ಕೊಂಚ ನಿಧಾನಗತಿಯನ್ನು ಅನುಸರಿಸುವುದು ಅನಿವಾರ್ಯ ಎಂಬುದನ್ನು ಸಮರ್ಥಿಸಿಕೊಂಡರು.
ಎ ಭಾಗದ ಮನುವಿನ ಮುಗ್ಧತೆ ಇಲ್ಲಿಯೂ ವ್ಯಕ್ತವಾಗುತ್ತಾ ಹೋಗುತ್ತದೆ. ಅದರ ಜೊತೆಗೊಂದು ಬದಲಾವಣೆ ಇರುತ್ತದೆ ಎಂದರು ರಕ್ಷಿತ್ ಶೆಟ್ಟಿ.
ಸೈಡ್ ಎ ಇದ್ದಷ್ಟೇ ಚಿತ್ರಮಂದಿರಗಳು ಸೈಡ್ ಬಿ ಗೆ ಇರುತ್ತವೆ. ಹಿಂದಿ ಹೊರತುಪಡಿಸಿ ದಕ್ಷಿಣ ಭಾಗದ ನಾಲ್ಕು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಕಾಣುತ್ತಿರುವುದರಿಂದ ಹೆಚ್ಚಿನ ಸ್ಕ್ರೀನ್ ಗಳು ಬೇಕಾಗುತ್ತವೆ ಎಂದರು.
ಇದು ನಮ್ಮ ಅತ್ಯುತ್ತಮ ಪ್ರಯತ್ನ. ಹಾಗಾಗಿ ಬಿಡುಗಡೆಯನ್ನು ಕೊಂಚ ಮುಂದಕ್ಕೆ ಹಾಕಬೇಕಾಯಿತು. ಒಂದು ಉತ್ತಮ ಆಶಯದ ಜೊತೆ ಬರುವ ಆಶಯ ನಮ್ಮದು ಎಂದು ಹೇಳುತ್ತಾ ಹೋದರು ರಕ್ಷಿತ್ ಶೆಟ್ಟಿ.