Snehapriya.com

June 8, 2025

ಆರ್.ಚಂದ್ರು ಕಬ್ಜ ಹೊಸ ದಿಕ್ಕು ಉಪ್ಪಿ ಹುಟ್ಟುಹಬ್ಬಕ್ಕೆ ಟೀಸರ್

Social Share :

ಕನ್ನಡ ಚಿತ್ರರಂಗದ ಹೊಸ ಯುಗ ಈಗ ಆರಂಭವಾಗಿದೆ.. ಕನ್ನಡದಲ್ಲಿ ಅದ್ದೂರಿ ಚಿತ್ರಗಳು ತಯಾರಾಗುತ್ತಿವೆ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿವೆ..

ಅಂತಹ ಪ್ಯಾನ್ ಇಂಡಿಯಾ ಸಿನಿಮಾ ಆಗುವ ದಿಶೆಯಲ್ಲಿ ಭರವಸೆ ಮೂಡಿಸಿರುವ ಮತ್ತೊಂದು ಅದ್ದೂರಿ ಚಿತ್ರ ಆರ್.ಚಂದ್ರು ನಿರ್ದೇಶನದ ‘ಕಬ್ಜ’. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ ಭಾರತೀಯ ಚಿತ್ರರಂಗದ ಅನೇಕ ಭಾಷೆಗಳ ನಟರು ಈ ಚಿತದಲ್ಲಿ ನಟಿಸಿದ್ದಾರೆ. ಡಾನ್ ಕಥೆ ಹೇಳುವ ‘ಕಬ್ಜ’ ಸಿನಿಮಾದ ಆಶಯಗಳು ದೊಡ್ಡ ಮಟ್ಟದಲ್ಲಿವೆ. ಪ್ರತಿ ಫ್ರೇಮ್ ನ್ನು ಕಲಾತ್ಮಕವಾಗಿಸುವಲ್ಲಿ ನಿರ್ಮಾಪಕರೂ ಆಗಿರುವ ಆರ್.ಚಂದ್ರು ಹಗಲಿರುಳು ಶ್ರಮಿಸಿದ್ದಾರೆ.

ಸುಮಾರು ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಒಂದು ಅರಮನೆಯನ್ನೇ ಕಟ್ಟಲಾಗಿದೆ. ಚಿತ್ರದ ಕಸೂತಿ ಕೆಲಸಗಳನ್ನು ನೋಡಿದವರು ಅದರ ವೈಭವವನ್ನು ಕೊಂಡಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರಿಗಂತೂ ಇದು ಮಹತ್ವದ ಸಿನಿಮಾ. ಹಾಗಾಗಿ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18ರಂದು ಅದ್ದೂರಿ ಸಮಾರಂಭ ನಡೆಯಲಿದೆ. ಇದೇ ವೇಳೆ ಚಿತ್ರದ ಮಹತ್ವ ಸಾರುವ ಟೀಸರ್ ಬಿಡುಗಡೆ ಕಾಣಲಿದೆ ಎಂಬುದು ನಿರ್ದೇಶಕ ಆರ್.ಚಂದ್ರು ಅವರ ಮಾಹಿತಿ.

ಒಂದು ಚಿತ್ರ ನಿರ್ಮಾಣದಲ್ಲಿ ಸುದೀರ್ಘ ಅವಧಿಯನ್ನು ಕಾಯ್ದುಕೊಂಡರೆ ಅದಕ್ಕೆ ಬೇಕಾದಷ್ಟು ಅರ್ಥಗಳಿರಬಹುದು; ಆದರೆ ಒಂದು ಸೊಗಸು ಕಲಾತ್ಮಕ ಭಾವಗಳಿಗೆ ತೆರೆದುಕೊಳ್ಳುವಾಗ ಸಮಯ ಹಿಡಿಯುತ್ತದೆ ಎಂಬುದು ಈ ಚಿತ್ರತಂಡದ ಮಾತು.

‘ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾ ಎಂಬುದನ್ನು ಅದರ ತಯಾರಿಕೆಯ ಹಂತದಲ್ಲಿಯೇ ರೇಟಿಂಗ್ ಮೂಲಕವೇ ತಿಳಿಯಪಡಿಸಲಾಗಿದೆ. ಅದರ ಜೊತೆ ಕನ್ನಡದ ಮಹತ್ವದ ಇಬ್ಬರು ಸ್ಟಾರ್ ಚಿತ್ರದಲ್ಲಿದ್ದಾರೆ. ಹಾಗಾಗಿ ಈ ಸಿನಿಮಾ ದಕ್ಷಿಣದ ಮತ್ತೊಂದು ಅದ್ದೂರಿ ಚಿತ್ರವಾಗಿ ಪ್ರಶಂಸೆಗೆ ಒಳಗಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *