Snehapriya.com

November 22, 2024

ಕಬ್ಜ ವ್ಯಾಪಾರಕ್ಕೆ ತೆರೆದುಕೊಂಡ ಹೆದ್ದಾರಿಯ ದೊಡ್ಡ ಬಾಗಿಲುಗಳು..

Social Share :

ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ಗೆ ವಿಶ್ವ ಮಾರುಕಟ್ಟೆಯ ಹೆಬ್ಬಾಗಿಲುಗಳೇ ತೆರೆದುಕೊಂಡಿವೆ.

ಕನ್ನಡದ ಅಭಿಮಾನಿ ದೇವರುಗಳ ದೇವರು ಡಾ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ಬಿಡುಗಡೆ ದಿನಾಂಕವಾಗಿ ಘೋಷಣೆ ಮಾಡಿಕೊಂಡಿರುವ ಕಬ್ಜ ಚಿತ್ರಕ್ಕೆ ಮಾರುಕಟ್ಟೆ ವಿಷಯದಲ್ಲಿ ಪ್ರತಿಕ್ರಿಯೆ ಗಳ ಮಹಾಪೂರವೇ ಹರಿದಿದೆ.

ಹಾಗಾಗಿ ಅದರ ವಿವರ ಹಂಚಿಕೊಳ್ಳಲು ಪತ್ರಕರ್ತರಿಗಾಗಿ ಆಪ್ತ ಔತಣಕೂಟ ಏರ್ಪಡಿಸಿದ್ದರು ಆರ್.ಚಂದ್ರು..

ಒಂದು ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದರೆ ಅದು ಕನ್ನಡ ಚಿತ್ರರಂಗದ ಗೆಲುವು..
ಒಂದು ದೊಡ್ಡ ಚಿತ್ರವು ವರ್ಷಗಟ್ಟಲೆ ಸಾವಿರಾರು ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ಬದುಕಿನ ಆಸರೆಯಾಗಿರುತ್ತದೆ..

ಈಗ ಕನ್ನಡದ ದೊಡ್ಡ ಚಿತ್ರಗಳಿಗೆ ಮಾರುಕಟ್ಟೆ ವಿಸ್ತಾರವಾಗಿರುವುದೂ ಅದರ ಪ್ರಯತ್ನದ ಆಶಯಗಳಲ್ಲೇ.
ಆದರೆ ಕೆ.ಜಿ.ಎಫ್ ಮಾದರಿಯ ದೊಡ್ಡ ದೊಡ್ಡ ಪ್ರಯತ್ನಗಳನ್ನು ಬೇರೆ ನಿರ್ದೇಶಕರು ಮಾಡುವುದು ಸಾಧ್ಯವೇ…

ಎಂಬ ಪ್ರಶ್ನೆಗೆ ಖಂಡಿತಾ ಸಾಧ್ಯ ಎಂದು ಪ್ರಯತ್ನದಲ್ಲಿ ಮುಳುಗಿದವರು ಕನ್ನಡದ ಎದೆಗಾರಿಕೆಯ ನಿರ್ದೇಶಕ ಆರ್.ಚಂದ್ರು..

ನಿರ್ದೇಶಕರಾಗಿ ಅಷ್ಟೇ ಅಲ್ಲ; ನಿರ್ಮಾಪಕರಾಗಿ ಸವಾಲು ಸ್ವೀಕರಿಸಿದ ಆರ್.ಚಂದ್ರು ತಮ್ಮ ಪ್ರಯತ್ನಗಳಿಗೆ ಉತ್ತಮ ಫಲಗಳನ್ನು ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವ ಕಬ್ಜ ಮಾರುಕಟ್ಟೆ ವಿಷಯದಲ್ಲೂ ಸಹ ಹೆಚ್ಚೆಚ್ಚು ಸುದ್ದಿ ಮಾಡತೊಡಗಿದೆ ಹಾಗಾಗಿ ಚಿತ್ರವು ಹೆಚ್ಚು ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿದೆ ಎಂಬುದು ಅವರ ವಿವರಣೆ.

ಕನ್ನಡ ಚಿತ್ರವೊಂದು ಮಾಡಿದ ಅತ್ಯುನ್ನತ ಸಾಧನೆಯ ಸಾರಗಳನ್ನು ಈ ವೇಳೆ ಅವರು ವಿವರಿಸಿದರು. ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಪಾತ್ರದಲ್ಲಿರುವ ಮತ್ತು ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳ ಪಟ್ಟಿ ಇರುವ ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದ್ದು, ಆಯಾ ಭಾಷೆಗಳಲ್ಲಿ ಅತಿ ದೊಡ್ಡ ವಿತರಕರು ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ.

ಹಿಂದಿ ಹಕ್ಕುಗಳನ್ನು ಆನಂದ್ ಪಂಡಿತ್ ಪಡೆದುಕೊಂಡಿದ್ದು, ತೆಲುಗಿಗೆ ಸುಧಾಕರ್ ಬಿಡುಗಡೆ ಮಾಡುತ್ತಿದ್ದಾರೆ. ಅದೇ ರೀತಿ ತಮಿಳು ಹಾಗೂ ಇತರ ಭಾಷೆಗಳಿಗೂ ಪ್ರತಿಷ್ಠಿತ ಸಂಸ್ಥೆಗಳೇ ಬಿಡುಗಡೆ ಮಾಡಲು ಮುಂದೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು‌ ಆರ್.ಚಂದ್ರು.

ಒಂದು ದೊಡ್ಡ ಚಿತ್ರವನ್ನು ಮಾಡುವ ಕನಸು ಕಂಡೆ ಆ ಚಿತ್ರವನ್ನು ಮಾಡುವ ದಾರಿ ಹೇಗೆಂದು ಕಂಡುಕೊಂಡೆ ಹಾಗಾಗಿ ಒಂದು ದೊಡ್ಡ ಕಲ್ಪನೆ ನನಸಾಗುವ ಹಾದಿಯಲ್ಲಿದೆ ಎಂದು ವಿವರಿಸಿದರು.

ಟ್ರೆಂಡಿಂಗ್ ನಲ್ಲಿ ಮುಂಚೂಣಿಯಲ್ಲಿರುವ ಕಬ್ಜ ಈಗಾಗಲೇ ಹಲವು ಸಾಧನೆಗಳನ್ನು ಮಾಡಿದೆ. ಹಾಗಾಗಿ ನಾವು ಸಾಕಷ್ಟು ಸೇಫ್ ಆಗಿದ್ದೇವೆ ಆದರೆ ಪ್ರಚಾರ ಕಾರ್ಯ ಹಾಗೂ ಆಡಿಯೋ ಬಿಡುಗಡೆ ಸಲುವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಇವೆಂಟ್ ಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿಯು ಬಂತು ಚಂದ್ರು ಅವರಿಂದ.

ಚಿತ್ರದ ಮೇಕಿಂಗ್ ನಲ್ಲಿ ಸೊಗಸಿದೆ ಹಾಗೂ ಹೆಚ್ಚುಗಾರಿಕೆ ಇದೆ. ವಿತರಕರು ಕೂಡ ಇದರ ಸೊಗಸನ್ನು ಕಂಡು ಅಚ್ಚರಿ ಪಟ್ಟಿದ್ದಾರೆ. ಹಾಗಾಗಿ ಚಿತ್ರದ ಮಾರುಕಟ್ಟೆಯ ವಿಷಯದಲ್ಲಿ ದೊಡ್ಡ ರಹದಾರಿಯೇ ಸಿಕ್ಕಿದೆ ಎಂಬುದು ಚಂದ್ರು ಅವರ ಆತ್ಮವಿಶ್ವಾಸದ ನುಡಿ.

ನಾನು ಸಾಮಾನ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾದೆ. ವಿಶೇಷತೆಗಳ ಜೊತೆಗೆ ಚಿತ್ರಗಳನ್ನು ಮಾಡಿ ಗೆಲುವಿನ ಮುನ್ನಡೆ ಸಾಧಿಸಿದೆ. ಅದು ಒಬ್ಬ ನಿರ್ದೇಶಕನಾಗಿ ನನಗೆ ಖುಷಿ ಕೊಟ್ಟಿದೆ ಎಂದರು.

ಸದ್ಯದಲ್ಲೇ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಕಾಣುತ್ತಿದ್ದು, ಅದರ ನಂತರ ಬೇರೆ ರಾಜ್ಯಗಳಲ್ಲೂ ದೊಡ್ಡ ಸಮಾರಂಭಗಳು ನಡೆಯುತ್ತವೆ ಎಂದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *