Snehapriya.com

June 10, 2025

ಜೇಮ್ಸ್ ಟೀಸರ್: ಅಪ್ಪು ಸರ್ ಹೆಗಲ ಮೇಲೆ ಕೈ ಇಟ್ಟು ಕೆಲಸ ಮಾಡಿಸಿದರು

Social Share :

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ‘ಜೇಮ್ಸ್’ ಟೀಸರ್ ಹೊರ ಬಂದಿದೆ.. ಆ ಮೂಲಕ ಅವರ ಅಸಂಖ್ಯಾತ ಅಭಿಮಾನಿಗಳ ಮನ ತಣಿಸಿದೆ. ಟೀಸರ್ ನೋಡಿದವರು ಅಬ್ಬಾ..! ಎಂಥಹ ಅದ್ಭುತ ಇದು..! ಎಂಬ ಮೋಡಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಬಿಡುಗಡೆ ಕಂಡ ತಕ್ಷಣವೇ ಮಿಲಿಯನ್ ಗೂ ಮೀರಿ ವೀಕ್ಷಕರನ್ನು ಮುಟ್ಟಿದ ಹೆಗ್ಗಳಿಕೆ ಅದಕ್ಕಿದೆ..

ಜೇಮ್ಸ್ ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರ. ವಿಧಿ ಅವರ ಬದುಕಿನಲ್ಲಿ ಹೀಗೂ ಆಟವಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.. ಡಬ್ಬಿಂಗ್ ಬಾಕಿ ಇತ್ತು. ಅಪ್ಪು ಹೊರಟು ಹೋದರು.. ಇಂತಹ ಸಂದರ್ಭದಲ್ಲಿ ದುಃಖದಲ್ಲಿ ಮುಳುಗಿದ ಚಿತ್ರತಂಡವನ್ನು ಪ್ರೋತ್ಸಾಹಿಸಿದವರು ಶಿವಣ್ಣ ಮತ್ತು ರಾಘಣ್ಣ.

ಹಾಗಾಗಿ ಚಿತ್ರ ಟೀಸರ್ ವರೆಗೆ ಬಂದು ಅದರ ಹೆಗ್ಗಳಿಕೆಯನ್ನು ತೋರಿಸಿಕೊಡುತ್ತಿದೆ. ಶಿವಣ್ಣ ಧ್ವನಿ ನೀಡಿ ಆಶೀರ್ವಾದ ಮಾಡಿದ್ದಾರೆ. ಕೆಲವೆಡೆ ಧ್ವನಿ ಮ್ಯಾಚ್ ಮಾಡು ಉನ್ನತ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ ಎಂಬುದು ಚಿತ್ರತಂಡದ ವಿವರಣೆ.

ಅಪ್ಪು ಸರ್ ಒಡನಾಟವೇ ನಮಗೆ ಭಾಗ್ಯ ತರುವ ವಿಷಯ. ಅವರು ಚಿತ್ರೀಕರಣದ ಸಂದರ್ಭದಲ್ಲಿ ತೋರುತ್ತಿದ್ದ ಪ್ರೀತಿ ಅಪ್ಯಾಯಮಾನವಾಗಿತ್ತು. ನಮಗೆ ಕೆಲಸದಲ್ಲಿ ಹುರಿದುಂಬಿಸುತ್ತಿದ್ದರು..
‘ಒತ್ತಡವನ್ನೇ ಆಶೀರ್ವಾದ’ ಮಾಡಿಕೊಳ್ಳಬೇಕು ಎಂಬ ಅವರ ಮಾತು ನೆನಪಾಗಿ ದುಃಖ ಉಮ್ಮಳಿಸಿ ಬರುತ್ತದೆ ಎಂದರು ನಿರ್ದೇಶಕ ಚೇತನ್ ಕುಮಾರ್.

ಅಪ್ಪು ಸರ್ ಪ್ರತಿ ಹೆಜ್ಜೆಯಲ್ಲಿಯೂ ಕೈ ಹಿಡಿದು ನಡೆಸಿದಂತೆ ಅನಿಸುತ್ತದೆ.. ಹೆಚ್ಚಿನ ಬಾರಿ ಅವರು ಹೆಗಲ ಮೇಲೆ ಕೈ ಇಟ್ಟು ನಡೆಸುತ್ತಾರೆ. ಆ ಚೇತನ ನಮ್ಮ ಪಾಲಿಗೆ ಈಗ ದೇವರು ಎನ್ನುತ್ತಲೇ ದುಃಖವನ್ನು ಹೊರ ಹಾಕಿದರು ಚೇತನ್ ಕುಮಾರ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *