ಕನ್ನಡದವರೇ ಆದ ಬಹುಭಾಷಾ ನಟ ಪ್ರಕಾಶ್ ರೈ ಈಗ ಕೋಮಲ್ ಕುಮಾರ್ ಅಭಿನಯದ ‘ಕಾಲಾಯ ನಮಃ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅಪೂರ್ವ ಕಲಾವಿದ ಎಂದು ಗುರುತಿಸಿಕೊಂಡಿರುವ ಪ್ರಕಾಶ್ ರೈ ಹಾಗೂ ಅನುಪಮ ಪ್ರತಿಭಾವಂತ ಎಂದು ಕರೆಸಿಕೊಂಡಿರುವ ಕೋಮಲ್ ಜೊತೆಗಿನ ಜೋಡಿ ಕುತೂಹಲ ಹೆಚ್ಚಿಸಿದೆ.
ಸದ್ಯ ಕಾಲಾಯ ನಮಃ ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದ್ದು, ಪ್ರಕಾಶ್ ರೈ ಅವರು ನಟಿಸುವ ಭಾಗದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.
ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕೋಮಲ್ ಕುಮಾರ್, ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮೊದಲಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.