Snehapriya.com

June 6, 2025

ನ.18 ಕ್ಕೆ ಚಿತ್ರಮಂದಿರಗಳಲ್ಲಿ ಪ್ರಜ್ವಲ್ ದೇವರಾಜ್ ಅಬ್ಬರ..

Social Share :

ಸಂಪೂರ್ಣ ಮನರಂಜನಾ ಪ್ಯಾಕೇಜ್ ಹೊಂದಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿರುವ ‘ಅಬ್ಬರ’ ಈ ವಾರ ಅಂದರೆ ನವೆಂಬರ್ 18ರಂದು ಬಿಡುಗಡೆ ಕಾಣುತ್ತಿದೆ.

ಮುಖ್ಯವಾಗಿ ತಂದೆ ಮಗನ ಭಾವನಾತ್ಮಕ ಸಂಬಂಧಗಳ ಮೇಲೆ ಚಿತ್ರಿತವಾಗಿರುವ ಅಬ್ಬರ ಮಾಸ್ ಎಂಟಟೈನ್ ಚಿತ್ರವಾಗಿದೆ ಎಂಬುದು ತಂಡದ ವಿವರ.

ಟೈಸನ್, ಕ್ರ್ಯಾಕ್ ನಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಗೀತರಚನೆಕಾರ ಕೆ.ರಾಮ್ ನಾರಾಯಣ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಸವರಾಜ್ ಮಂಚಯ್ಯ ಚಿತ್ರದ ನಿರ್ಮಾಪಕರು.

ಮೂರು ವಿಭಿನ್ನ ಬಗೆಯ ಶೆಡ್ ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಟಿಸಿದ್ದಾರೆ.

ಶೋಭರಾಜ್, ರವಿಶಂಕರ್, ಶಂಕರ್ ಅಶ್ವಥ್, ವಿಕ್ಟರಿವಾಸು ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಜೆ.ಕೆ.ಗಣೇಶ್ ಕ್ಯಾಮೆರಾ ಚಿತ್ರದ ವಿಶೇಷ.

ಹಾಗೆಯೇ ಎರಡು ಹಾಡುಗಳನ್ನು ಥೈಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷವಾಗಿದೆ ಎಂಬುದು ಚಿತ್ರತಂಡದ ವಿವರಣೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *