ಕಿರು ಚಿತ್ರಗಳ ರೀತಿಯಲ್ಲಿಯೇ ಕನ್ನಡದಲ್ಲಿ ಹೊಸ ಬಗೆಯ ಆಲ್ಬಂ ಸಾಂಗ್ ಅಥವಾ ಗೀತ ಗುಚ್ಛಗಳು ಬಿಡುಗಡೆ ಕಾಣುವುದು ಇಂದಿನ ದಿನಗಳಲ್ಲಿ ವಿಶೇಷ ಸಂಗತಿಯೇ ಆಗಿದೆ..
ಈ ಹಾಡು ಮತ್ತು ಅದರ ವೈಶಿಷ್ಟ್ಯ ತಿಳಿಯುವ ಸಾಲಿಗೆ ಕನ್ನಡದ ಅನೇಕ ಚಿತ್ರಗಳಿಗೆ ಗೀತ ರಚನೆ ಮಾಡಿರುವ ಶಿವನಂಜೇಗೌಡ ಅವರ ‘ಊಸರವಳ್ಳಿ’ ಭಗ್ನ ಪ್ರೇಮಿಗಳ ಹೃದಯ ಗೀತೆ ಸೇರಿಕೊಂಡಿದೆ.
‘ಕುಡುಕುನ್ ಮಾಡ್ಬುಟ್ಳು.. ಕುಡಿಯೋದ್ ಕಲ್ ಸುಬುಟ್ಳು..’ ಎಂಬ ಗೀತೆ ಈಚೆಗೆ ಎ2 ಮ್ಯೂಜಿಕ್ ಮೂಲಕ ಬಿಡುಗಡೆಗೊಂಡಿದ್ದು, ಈ ಗೀತೆ ಈಗ ಯುವ ಜನರ ಹಾಟ್ ಫೆವರಿಟ್ ಆಗಿದೆ.
ಶಿವನಂಜೇಗೌಡ ಅವರೇ ಸಾಹಿತ್ಯ ಬರೆದು ಸಂಗೀತ ನೀಡಿದ್ದಲ್ಲದೆ ವಿಡಿಯೋ ಹಾಡಿಗೆ ನಿರ್ದೇಶನ ಕೂಡ ಮಾಡಿದ್ದಾರೆ. ರವೀಂದ್ರ ಸೊರಗಾವಿ ಹಾಡಿರುವ ಈ ಹಾಡಿನಲ್ಲಿ ಸಾಕಷ್ಟು ವೈವಿಧ್ಯವಿದೆ. ವೈಭವದ ದೃಶ್ಯಗಳೂ ಇವೆ.
ಊಸರವಳ್ಳಿ ಎಂದರೆ ಬಣ್ಣ ಬದಲಿಸುವ ವ್ಯಕ್ತಿತ್ವ. ಅದನ್ನು ಹಾಡಿನಲ್ಲೇ ಹೇಳಲಾಗಿದೆ. ಸ್ನಿಗ್ಧ, ಶಿವತೇಜ್ ಮೊದಲಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಭಗ್ನ ಗೀತೆಯಾಗಿ ಗಮನ ಸೆಳೆದಿರುವ ಈ ಗೀತೆ ಕೇವಲ ನಾಲ್ಕೈದು ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಕರನ್ನು ತಲುಪಿ ಸುದ್ದಿ ಮಾಡಿದೆ.
ಶಿವನಂಜೇಗೌಡರ ಮಾಸ್ ಕ್ಲಾಸ್ ಹಾಡು ಇದಾಗಿದ್ದು, ಇದರ ಸ್ಫೂರ್ತಿ ಯಿಂದ ಮತ್ತಷ್ಟು ಆಲ್ಬಂ ಗೀತೆಗಳನ್ನು ನಿರ್ಮಿಸುವ ಹಾಗೂ ಸಂಗೀತ ನಿರ್ದೇಶನದ ಹೊಸ ಹೆಜ್ಜೆಗೆ ಅವರು ತಯಾರಿ ನಡೆಸಿದ್ದಾರೆ.