Snehapriya.com

June 5, 2025

ಓಂ ಪ್ರಕಾಶ್ ಎದ್ದರು ಫಿನಿಕ್ಸ್ ನಂತೆ..

Social Share :

ಸೋತು ಸುಣ್ಣವಾದ ಬಳಿಕ ಯಾವುದೋ ಆಸರೆಯಲ್ಲಿ ಎದ್ದು ಗೆಲುವಿನ ಓಟದಲ್ಲಿ ಸೇರಿಕೊಂಡವರಿಗೆ ಫಿನಿಕ್ಸ್ ನಂತೆ ಎದ್ದವರು ಎಂದು ಹೇಳುವುದುಂಟು..

ಚಿತ್ರರಂಗದಲ್ಲಿ ಕೆಲ ಸಮಯ ಮರೆತಂತ್ತಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಈಗ ಫಿನಿಕ್ಸ್ ನಂತೆ ಮೇಲೆದ್ದು ನಿಂತಿದ್ದಾರೆ.. ಅದೂ ಅದೇ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ..

ಲಾಕಪ್ ಡೆತ್, Ak 47, ಮಂಡ್ಯ, ಹುಬ್ಬಳ್ಳಿ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಓಂಪ್ರಕಾಶ್ ರಾವ್ ಮತ್ತೆ ನಿರ್ದೇಶನದ ಕ್ಯಾಪ್ ಹಾಕಿದ್ದಾರೆ.

ಅವರ ‘ಫೀನಿಕ್ಸ್’ ಚಿತ್ರದ ಮುಹೂರ್ತ ಇತ್ತೀಚೆಗೆ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ನೆರವೇರಿತು. ಎನ್ ಸೋಮೇಶ್ವರ್ ಜ್ಯೋತಿ ಬೆಳಗುವ ಮೂಲಕ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು. ಬೇಬಿ ಕೃಷಿ ಆರಂಭ ಫಲಕ ತೋರಿದರು. ಎ.ಎಂ ಉಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು.

ಇದೊಂದು ಮಹಿಳಾ ಪ್ರಧಾನ ಚಿತ್ರ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮುಖ್ಯ ಪಾತ್ರದಲ್ಲಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವೆಂಕಟ್ ಗೌಡ ಅರ್ಪಿಸುತ್ತಿರುವ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ಶ್ರೀ ಗುರು ಚಿತ್ರಾಲಯ ಬ್ಯಾನರ್ ನಲ್ಲಿ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾ ದಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದು ನನ್ನ ನಿರ್ದೇಶನದ 49ನೇ ಚಿತ್ರ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಚಿತ್ರದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದವರು ನಿಮಿಕಾ ರತ್ನಾಕರ್.

ನಾನು ಈ ಹಿಂದೆ ಓಂಪ್ರಕಾಶ್ ರಾವ್ ಅವರ ನಿರ್ದೇಶನ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ. ಈ ಚಿತ್ರದಲ್ಲೂ ನನ್ನ ಪಾತ್ರ ಚೆನ್ನಾಗಿದೆ ಎಂಬುದು ಕೃತಿಕ ಲೋಗೊ ವಿವರಣೆ.

ಭಾಸ್ಕರ್ ಶೆಟ್ಟಿ ಅವರದು ಪೊಲೀಸ್ ಅಧಿಕಾರಿ ಪಾತ್ರ ಎಂಬ ವಿವರ ಬಂತು.
ಕಾಕ್ರೋಜ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

ಓಂ ಪ್ರಕಾಶ್ ರಾವ್ ಅವರ ಎಲ್ಲಾ ಚಿತ್ರಗಳಿಗೂ ಸಂಭಾಷಣೆ ಬರೆದಿರುವ ನಿರ್ದೇಶಕ ರಂ.ಎಸ್.ರಮೇಶ್ ಈ ಚಿತ್ರಕ್ಕೂ ಬರೆಯುತ್ತಿರುವುದಾಗಿ ವಿವರಿಸಿದರು.

ಸಾಧುಕೋಕಿಲ ಸಂಗೀತ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ವಿಜಯನ್ ಸಾಹಸ ಹಾಗೂ ರಾಮಚಂದ್ರ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *