ಹೀಗ್ಗೆ 10 ವರ್ಷಗಳ ಹಿಂದೆ ಅತ್ಯುತ್ತಮ ಪ್ರೇಮ್ ಕಹಾನಿ ಹಾಗೂ ಮನ ಸೆಳೆಯುವ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಸಂಜು ವೆಡ್ಸ್ ಗೀತಾ’ ಮತ್ತೆ ಸದ್ದು ಮಾಡುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ಪ್ರೇಮ್ ಕಹಾನಿ ಸಿನಿಮಾಗಳ ವಿಶೇಷ ನಿರೂಪಣೆ ಮಾಡುವಲ್ಲಿ ಹೆಸರಾಗಿರುವ ನಾಗ್ ಶೇಖರ್ ಈಗ ಸಂಜು ವೆಡ್ಸ್ ಗೀತಾ ಭಾಗ ಎರಡರ ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ.
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರುವ ‘ಸಂಜು ವೆಡ್ಸ್ ಗೀತಾ-2’ ಈಗ ಬಿಡುಗಡೆಗೆ ಸಜ್ಜುಗೊಂಡಿದ್ದು, ಚಿತ್ರದ ಹಾಡಿನ ಬಿಡುಗಡೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಚಿತ್ರತಂಡದ ಮಾತು ಗಮನ ಸೆಳೆಯಿತು.
ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಗೀತಸಾಹಿತಿ ಕವಿರಾಜ್ ಬರೆದಿರುವ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ’ ಎಂಬ ಅದ್ಭುತ ಮೆಲೋಡಿ ಗೀತೆ ಬಿಡುಗಡೆಗೊಂಡಿತು.
ರಿಯಲ್ ಸ್ಟಾರ್ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ
ಛಲವಾದಿ ಕುಮಾರ್ ನಿರ್ಮಾಣದ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದ್ದು, ಡಿಸೆಂಬರ್ 6ರಂದು ಚಿತ್ರವು ತೆರೆ ಕಾಣುತ್ತಿದೆ ಎಂಬ ಮಾಹಿತಿಯನ್ನು ನೀಡಿತು ಚಿತ್ರತಂಡ.
ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ ರಿಯಲ್ ಸ್ಟಾರ್ ಉಪೇಂದ್ರ, ಈ ಚಿತ್ರದ ಕ್ಲೈಮ್ಯಾಕ್ಸ್ ಏನೆಂಬುದು ನನಗೆ ತಿಳಿದಿದೆ. ಹಾಗಾಗಿ ಈ ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಚಿತ್ರದಲ್ಲಿ ರೂಪಕದ ಮಾದರಿಯಲ್ಲಿರುವ ಹಾಡು ಸ್ವಿಟ್ಜರ್ಲೆಂಡ್ ಸೈನಿಕನ ಕುರಿತ್ತದ್ದಾಗಿದೆ. ಈ ಹಾಡು ಹೃದಯಸ್ಪರ್ಶಿಯಾಗಿದೆ ಎಂಬುದು ಚಿತ್ರ ನೋಡಿದವರಿಗೆ ಮನವರಿಕೆಯಾಗುತ್ತದೆ. ಈ ಪ್ರಸಂಗ ಮತ್ತು ಸಂಜು ಮತ್ತು ಗೀತಾ ಹಾಡುಗಳು ಚಿತ್ರದ ಹೈಲೈಟ್ ಆಗಲಿವೆ ಎಂದರು ನಿರ್ದೇಶಕ ನಾಗ್ ಶೇಖರ್.
ಮುಖ್ಯವಾಗಿ ರೇಷ್ಮೆ ಬೆಳೆಗಾರರ ಸಂಕಷ್ಟದ ಎಳೆ ಚಿತ್ರದಲ್ಲಿ ಅಳವಡಿಸಲಾಗಿದೆ. ವಿಶ್ವವ್ಯಾಪಿಯಾದ ಸಮಸ್ಯೆಯನ್ನು ಆ ಮೂಲಕ ನಿರೂಪಿಸಲಾಗಿದೆ ಎಂದರು.
ನಾಗ್ ಶೇಖರ್ ಟ್ಯೂನ್ ಗಳನ್ನು ಬೇಗ ಒಪ್ಪುವವರಲ್ಲ; ಆದರೆ ‘ಅವನು ಸಂಜು..’ ಗೀತೆಯ ಟ್ಯೂನ್ ತಕ್ಷಣಕ್ಕೆ ಒಪ್ಪಿದ್ದು ಅಚ್ಚರಿಯಾಯ್ತು ಎಂದವರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್.
ನಾಗ್ ಶೇಖರ್ ಅವರಿಗೆ ಬರೆಯುವಾಗ ಸಾಹಿತ್ಯದ ಅತ್ಯುತ್ತಮ ಪದ ಬಳಕೆ ಅದಾಗೇ ಆಗುವುದು ನನಗೇ ಅಚ್ಚರಿ ಎಂದರು ಗೀತ ರಚನೆಕಾರ ಕವಿರಾಜ್.
ನಿರ್ಮಾಪಕ ಛಲವಾದಿ ಕುಮಾರ್ ಅವರಿಗೆ ಚಿತ್ರತಂಡದ ಮೇಲೆ ಸಂಪೂರ್ಣ ವಿಶ್ವಾಸ. ಈ ಚಿತ್ರ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣುತ್ತದೆ ಮತ್ತು ಸೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಗಾರನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದು, ಗೀತಾ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ರಾಗಿಣಿ ದ್ವಿವೇದಿ ಹಾಗೂ ಚೇತನ್ ಚಂದ್ರ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವಿತರಕ ಗೋಕುಲರಾಜ್, ಛಾಯಾಗ್ರಾಹಕ ಸತ್ಯ ಹೆಗಡೆ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ನ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಡೆಸಲಾಗಿದೆ.