ಮಾಂಕ್ ದಿ ಯಂಗ್ ಎಂಬುದು ಚಿತ್ರದ ಹೆಸರು.. ಹೆಸರೇ ಗಮನ ಸೆಳೆಯುವಂತಿದೆ ಎಂದುಕೊಂಡರೇ..
ಚಿತ್ರ ತಂಡದ ಆಶಯಗಳು ಅದಕ್ಕಿಂತ ಭಿನ್ನವಾಗಿದ್ದವು. ಮುಖ್ಯವಾಗಿ ಚಿತ್ರದ ನಿರ್ಮಾಪಕರು ಡ್ರೆಸ್ ಕೋಡ್ ನಿಂದ ಹಿಡಿದು ಸಾಕಷ್ಟು ವಿಷಯಗಳಲ್ಲಿ ಗಮನ ಸೆಳೆದರು.
ಅದು ಚಿತ್ರದ ಹಾಡು ಬಿಡುಗಡೆಯ ಸಮಾರಂಭ. ಹಾಗಾಗಿ ಗಣ್ಯರ ಉಪಸ್ಥಿತಿ ಇತ್ತು. ತಂಡದ ಹಾಡು ಬಿಡುಗಡೆಯ ಪ್ರಸ್ತುತಿ ಕೂಡ ವಿಭಿನ್ನವಾಗಿತ್ತು.
ಸುಪ್ರೀತ್ ಫಾಲ್ಗುಣ ಸಂಗೀತ, ಅಶ್ವಿನ್ ಶ್ಯಾನ್ ಭೋಗ್ ಗೀತರಚನೆ ಇದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಹಾಡನ್ನು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ ಎಂಬ ವಿವರಗಳು ಬಂದವು..
ಚಿತ್ರವು ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಹಾಡುಗಳೂ ವಿಶೇಷವಾಗಿವೆ ಎಂಬುದು ನಿರ್ದೇಶಕ ಮಾಸ್ಚಿತ್ ಸೂರ್ಯ ನೀಡಿದ ಮಾಹಿತಿ.
ಸರೋವರ್ ಹಾಗೂ ಸೌಂದರ್ಯ ಗೌಡ ಮುಖ್ಯ ಪಾತ್ರದಲ್ಲಿದ್ದಾರೆ. ಉಷಾ ಭಂಡಾರಿ, ಶಿವಪ್ಪ ಮೊದಲಾದ ಕಲಾವಿದರ ದಂಡು ಚಿತ್ರದಲ್ಲಿದೆ.
ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್, ಲಾಲ್ ಚಂದ್ ಖತಾರ್ ಇದರ ನಿರ್ಮಾಪಕರು. ಛಾಯಾಗ್ರಾಹಕ ಕಾರ್ತಿಕ್ ಶರ್ಮ, ನೃತ್ಯ ನಿರ್ದೇಶಕ ಹರ್ಷವರ್ಧನ್ ಚಿತ್ರದ ಬಗ್ಗೆ ವಿವರ ಕೊಟ್ಟರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಉಪಾಧ್ಯಕ್ಷ ಸುಂದರ್ ರಾಜ್ ಚಿತ್ರದ ಹಾಡು ಬಿಡುಗಡೆಗೊಳಿಸಿ ಶುಭ ಕೋರಿದರು.
ನಟ, ಸಾಹಸ ನಿರ್ದೇಶಕ ಅಪ್ಪು ವೆಂಕಟೇಶ್, ನಿರ್ಮಾಪಕ ಮಂಜುನಾಥ್, ನಟ ದೀಕ್ಷಿತ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ ಇತ್ತು.