ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಯುವ ಪ್ರತಿಭೆ ರೋಹಿತ್ ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ಮಾಣ ಮಾಡಿರುವ ‘ರಕ್ತಾಕ್ಷ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.
ರೂಪದರ್ಶಿಯಾಗಿ ಬಹಳಷ್ಟು ಗಮನ ಸೆಳೆದಿರುವ ಯುವ ಪ್ರತಿಭೆ ರೋಹಿತ್ ಮುಖ್ಯ ಪಾತ್ರದಲ್ಲಿರುವ ‘ರಕ್ತಾಕ್ಷ’ ವಿಭಿನ್ನ ಬಗೆಯ ಹೊಸ ಪೋಸ್ಟರ್ ಬಿಡುಗಡೆಗೊಂಡಿದೆ.
ಗಾಯಗೊಂಡ ಹುಲಿಯ ವರಸೆಯಲ್ಲಿ ಯುವ ನಟ ರೋಹಿತ್ ಕಾಣಿಸಿಕೊಂಡಿದ್ದಾರೆ. ಕಣ್ಣುಗಳು ಕೆಂಡದುಂಡೆ; ಎಂತಹವನ್ನು ಸದೆ ಬಡಿಯುವ ಆಕ್ರೋಶದಲ್ಲಿ ರೋಹಿತ್ ಕಾಣುವುದು ಹೊಸತನದ ಭರವಸೆ ಹುಟ್ಟು ಎಂಬುದು ಎದ್ದು ಕಾಣುತ್ತದೆ.
ಮಾಡೆಲಿಂಗ್ ಲೋಕದಲ್ಲಿ ನವ ನವೀನ ಛಾಪು ಮೂಡಿಸಿರುವ ರೋಹಿತ್ ರಕ್ತಾಕ್ಷ ಮೂಲಕ ನಟನಾಗಿ ಪ್ರತಿಭಾ ಸಾಮರ್ಥ್ಯ ಕ್ಕೆ ಮುಂದಾಗಿದ್ದಾರೆ. ಸಿನಿಮಾದಲ್ಲಿ ಸಾಧನೆ ಮಾಡುವ ಛಲದಲ್ಲಿ ಮುನ್ನಡೆಯುತ್ತಿರುವ ರೋಹಿತ್ ಮೂಲತಃ ಸಾಮಾಜಿಕ ಕಳಕಳಿ ಇರುವ ಯುವಕ.
ಹಾಗಾಗಿಯೇ ಈಚೆಗೆ ಅಂದರೆ ಆಗಸ್ಟ್ 15 ರಂದು ತಮ್ಮ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯದ ಮೂಲಕವೇ ಆಚರಿಸಿಕೊಂಡಿದ್ದಾರೆ. ಮಸ್ಕಿ, ಲಿಂಗಸೂರು, ಸಿಂಧನೂರು ಮೊದಲಾದ ಕಡೆಗಳಲ್ಲಿ ಇವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದಿವೆ.
ರಕ್ತಾಕ್ಷ ಚಿತ್ರವನ್ನು ಸಾಯಿ ಪ್ರೊಡಕ್ಷನ್ ಹೌಸ್ ಹೆಸರಿನಲ್ಲಿ ರೋಹಿತ್ ನಿರ್ಮಾಣ ಮಾಡಿದ್ದು, ಚಿತ್ರವು ಸದ್ಯವೇ ತೆರೆ ಕಾಣಲಿದೆ.
ವಾಸುದೇವ ಎಸ್.ಎನ್ ನಿರ್ದೇಶನವಿರುವ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಪ್ರಮೋದಶೆಟ್ಟಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯವಿದ್ದು, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ.