Snehapriya.com

June 9, 2025

ಬಿಡುಗಡೆಯ ಹಾದಿಯಲ್ಲಿ ಪ್ರೇಮಕಥೆ ಮೆಲೋಡಿ ಡ್ರಾಮ

Social Share :

ಇದೊಂದು ಪ್ರೇಮಕಥೆ. ಸೊಗಸಾದ ಸಂಗೀತದ ಜೊತೆ ಬೆರೆತ ಲವ್ಲಿ ಲವ್ಲಿ ಮತ್ತು ಕಚಗುಳಿಯ ಅನುಭವ ನೀಡುವ ಚಿತ್ರ.

ಹೆಸರು ‘ಮೆಲೋಡಿ ಡ್ರಾಮ’. ನಿನ್ನ ಜೊತೆ ನನ್ನ ಕಥೆ ಎಂಬುದು ಟ್ಯಾಗ್ ಲೈನ್. ಪ್ರೇಮ ಆರಾಧನೆಯ ಜೊತೆಗೆ ಅದರ ಉನ್ಮಾದದ ಅಭಿವ್ಯಕ್ತಿ ಕಾಣುತ್ತದೆ.

ಹಾಗೆಂದು ಸಮರ್ಥನೆ ಕೊಟ್ಟರು ನಿರ್ದೇಶಕ ಮಂಜು ಕಾರ್ತಿಕ್ ಜಿ. ಇದು ಭಾವನೆಗಳ ಜೊತೆ ಬೆರೆತ ಸಂಬಂಧಗಳ ಸುತ್ತ ನಡೆಯುವ ಕಥೆ. ತಪ್ಪು ತಿದ್ದಿ ನಡೆದರೆ ಎಲ್ಲವೂ ಸರಿ ಇರುತ್ತದೆ ಎಂಬುದು ಸಿದ್ದಾಂತವಲ್ಲ ಅದೊಂದು ವಾಸ್ತವ.

ಸತ್ಯ ಹಾಗೂ ಸುಕೃತ ಮುಖ್ಯ ಪಾತ್ರದಲ್ಲಿದ್ದಾರೆ. ಜೊತೆಗೆ ಸಾಕಷ್ಟು ಪಾತ್ರಗಳು ಅವರ ಪಾತ್ರಗಳಿಗೆ ಬೆಂಬಲವಾಗಿವೆ. ಇದು ಸಂಗೀತಮಯವಾದ ಪ್ರೇಮಕಥೆ ಎಂಬ ವಿವರಗಳು ಬಂದವು.

ಕ್ರೀಡಾ ತರಬೇತುದಾರಾಗಿರುವ ಹಾಗೂ ಬಿಲ್ಡರ್ ಆಗಿ ಗುರುತಿಸಿಕೊಂಡಿರುವ ಎಂ.ನಂಜುಂಡರೆಡ್ಡಿ ಈ ಚಿತ್ರದ ನಿರ್ಮಾಪಕರು. ನನ್ನ ಕ್ಷೇತ್ರದ ಹೊರತಾಗಿ ಸಿನಿಮಾ ಕ್ಷೇತ್ರದ ಮೇಲೆ ಆಸಕ್ತಿ ಮೂಡಿದ ಪರಿಣಾಮ ಈ ಚಿತ್ರದ ನಿರ್ಮಾಣ ಮಾಡಿದ್ದೇನೆ ಎಂದರು ನಂಜುಂಡರೆಡ್ಡಿ.

ಸಾಕಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕಾಯಕದಲ್ಲಿದ್ದರೂ ಚಿಕ್ಕ ವಯಸ್ಸಿನಿಂದ ಸಿನಿಮಾ ನೋಡುವ ಚಟ ಅಂಟಿಸಿಕೊಂಡಿದ್ದರಿಂದ ಅದು ಸಿನಿಮಾ ಮಾಡುವಲ್ಲಿಗೆ ಬಂದು ನಿಂತಿದೆ ಎಂದರು.

ಕಿರಣ್ ರವೀಂದ್ರ ನಾಥ್ ಸಂಗೀತದಲ್ಲಿ
7 ಹಾಡುಗಳಿವೆ. ಬಾಲಿವುಡ್ ನ ಮೆಲೋಡಿ ಕ್ವೀನ್ ಎಂದೇ ಹೆಸರಾಗಿರುವ ಪಲಾಕ್ ಮುಚ್ಚಲ್ ಎರಡು ಹಾಡು ಹಾಡಿರುವುದು ವಿಶೇಷ.

ಮೆಲೋಡಿ ಎಂಬುದಕ್ಕೆ ಉದಾಹರಣೆಯಾಗಿ ಹಾಡುಗಳು ನಿಂತಿವೆ. ಹೆಸರಾಂತ ಗಾಯಕರಿಗೆ ಅವಕಾಶ ಕಲ್ಪಿಸಿರುವುದು ಈ ಚಿತ್ರದ ವಿಶೇಷ ಎಂದರು ಕಿರಣ್ ರವೀಂದ್ರನಾಥ್.

ದೇಶ ಕಾಯುವ ಯೋಧನ ಮಹಾತ್ಮೆ ಕುರಿತ ಹಾಡನ್ನು ಕೈಲಾಸ್ ಖೇರ್ ಹಾಡಿದ್ದಾರೆ. ಅದು ನಮ್ಮ ಚಿತ್ರದ ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು ನಿರ್ದೇಶಕರು.

ಪುಟಾಣಿ ಸ್ಮಯ, ಛಾಯಾಗ್ರಾಹಕ ಮನು, ನಟರಾದ ವೈಭವ್ ನಾಗರಾಜ್,
ನವೀನ್ ಸಮೃದ್, ಅಶ್ವಿನ್ ಹಾಸನ್, ವಿನೋದ್ ಹಾಗೂ ಸಂಕಲನಕಾರ
ಆರ್.ಮಂಜು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *