Snehapriya.com

June 9, 2025

ಪ್ಲೇಮಿಂಗೋ ಸೆಲೆಬ್ರಟಿ ವರ್ಲ್ಡ್ ಫಿಲ್ಮ್ ಸಂಸ್ಥೆಗೆ ದಶಕದ ಸಂಭ್ರಮ

Social Share :

ಲವ್ಲಿಸ್ಟಾರ್ ಪ್ರೇಮ್ ಹಾಗೂ ಕಾಂತಾರ ಹುಡುಗಿ ಸಪ್ತಮಿ ಗೌಡ ಅವರಿಗೆ ಸಾಧಕ ಪ್ರಶಸ್ತಿ..

ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿರುವ ‘ಪ್ಲೇಮಿಂಗೋ ಸೆಲೆಬ್ರಟಿ ವರ್ಲ್ಡ್’ ಗೆ ಈಗ ದಶಕದ ಸಂಭ್ರಮ..

ಸಿನಿಮಾ ರಂಗದ ಕುರಿತು ತರಬೇತಿ ನೀಡುವ ಸಂಸ್ಥೆಯಾಗಿ ಇಲ್ಲಿಯವರೆಗೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿರುವ ಸಂಸ್ಥೆಯು ಸಿನಿಮಾ ಸಾಧಕರಿಗೆ ಪ್ರಶಸ್ತಿ‌ ನೀಡುತ್ತಾ ಹಲವು ಮೈಲುಗಲ್ಲು ಸ್ಥಾಪಿಸಿದೆ.

ಧವನ್ ಸೋಹ ಸಾರಥ್ಯದಲ್ಲಿ 2013 ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆ ಇಲ್ಲಿಯವರೆಗೂ ಹಲವು ಪ್ರತಿಭೆಗಳನ್ನು ತರಬೇತುಗೊಳಿಸಿ ಸಿನಿಮಾ ರಂಗಕ್ಕೆ ನೀಡಿದೆ. ಅಲ್ಲದೆ ಪ್ರತಿ ವರ್ಷ ಸಿನಿಮಾ ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಈ ಬಾರಿ ‘ಪ್ರೇಮಂ ಪೂಜ್ಯಂ’ ಚಿತ್ರದ ಅಮೋಘ ಅಭಿನಯಕ್ಕಾಗಿ ಲವ್ಲಿಸ್ಟಾರ್ ಪ್ರೇಮ್ ಹಾಗೂ ಕಾಂತಾರ ಚಿತ್ರದ ಅಭಿನಯಕ್ಕಾಗಿ ಸಪ್ತಮಿ ಗೌಡ ಅವರಿಗೆ ಸೋಮವಾರ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆರಂಭದಲ್ಲಿ ಸಂಸ್ಥೆಗೆ ದಿವಂಗತ ಸಂಕೇತ್ ಕಾಶಿ ಪ್ರಾಂಶುಪಾಲರಾಗಿದ್ದರು. ನಂತರ ರೇಖಾದಾಸ್ ಕೆಲ ಸಮಯ ಇದ್ದರು. ಪ್ರಸ್ತುತ ಹಿರಿಯ ನಟಿ ಭವ್ಯ ಸಂಸ್ಥೆಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಟನೆ, ಮಾಡೆಲಿಂಗ್, ನೃತ್ಯ, ನಿರ್ದೇಶನ ಹೀಗೆ ಸಿನಿಮಾ ನಿರ್ಮಾಣದ ವಿಷಯದಲ್ಲಿ ತರಬೇತಿ ನೀಡುತ್ತಿರುವ ಸಂಸ್ಥೆ, ಹೊಸ ವರ್ಷದ ಸಂದರ್ಭದಲ್ಲಿ ಕ್ಯಾಲೆಂಡರ್ ಕೂಡ ಹೊರತರುತ್ತಿದೆ.

ಈ ಬಾರಿಯ ಸಾಧಕ ಪ್ರಶಸ್ತಿ ಸ್ವೀಕರಿಸಿದ ಲವ್ಲಿಸ್ಟಾರ್ ಪ್ರೇಮ್ ಹಾಗೂ ಸಪ್ತಮಿ ಗೌಡ ಹರ್ಷ ವ್ಯಕ್ತಪಡಿಸಿದರು. ಸಂಸ್ಥೆ ಇನ್ನೂ ಉಜ್ವಲವಾಗಿ ಬೆಳೆಯಲಿ ಎಂದು ಆಶಿಸಿದರು.

ಹಿರಿಯ ನಟಿ ಭವ್ಯ ಸಂಸ್ಥೆಯ ಮುಖ್ಯಸ್ಥ ಧವನ್ ಸೋಹ ಹಾಗೂ ಇತರರು ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *