ಆಧುನಿಕ ಜೀವನ ಶೈಲಿಯಲ್ಲಿ ಮೋಹ ಪಾಶಕ್ಕೆ ಸಿಲುಕಿದವರ ಕಥೆ ಏನಾಗಬಹುದು.. ಥ್ರಿಲ್ಲಿಂಗ್ ಕ್ಷಣಗಳನ್ನು ಹುಡುಕಿದವರು ಏನಾದರು ಎಂಬುದನ್ನು ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ..
ಅದೇ ಲಿಫ್ಟ್ ಸ್ಟಿಕ್ ಮರ್ಡರ್..!
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಹೊಸ ಸಾಹಸಗಳಿಗೆ ಮನಸ್ಸು ಮಾಡಿದರೆ ಎದುರಾಗುವ ಆಪತ್ತು ಹೇಗಿರುತ್ತದೆ ಎಂಬುದರ ಕೈಗನ್ನಡಿ ಈ ಸಿನಿಮಾ..
ಹಾಗೆಂದು ಚಿತ್ರತಂಡ ಹೇಳಿಕೊಂಡಿದೆ.
ಹೆಚ್ಚು ಪರಿಚಯವೇ ಇಲ್ಲದವರ ಜೊತೆ ಬೇರೆ ರೀತಿಯ ಸಾಹಸ ಮಾಡಲು ಹೋದರೆ ಏನಾಗುತ್ತದೆ..
ಮೋಜು ಮಸ್ತಿ ಮತ್ತು ಆಪತ್ತು ಇಂತಹ ವಿಷಯಗಳ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ ಎಂಬುದು ನಿರ್ದೇಶಕ ರಾಜೇಶ್ ಮೂರ್ತಿ ವಿವರಣೆ.
ಮಾಡೆಲಿಂಗ್ ಮೂಲಕ ಚಿತ್ರತಂಗಕ್ಕೆ ಪರಿಚಯವಾಗುತ್ತಿರುವ ಉತ್ತರ ಕರ್ನಾಟಕ ಮೂಲದ ಆರ್ಯನ್ ರಾಜ್, ಹೈದರಾಬಾದ್ ಮೂಲದ ಅಲೈಕಾ ಮುಖ್ಯ ಪಾತ್ರದಲ್ಲಿದ್ದಾರೆ.
ಕೊಲೆಯೊಂದರ ತನಿಖೆಯ ಸುತ್ತ ಕಥೆ ಇರುತ್ತದೆ. ಡೇಟಿಂಗ್ ಚಾಟಿಂಗ್ ಉಂಟು ಮಾಡುವ ಅಪಾಯಗಳನ್ನು ಚಿತ್ರವು ಒಳಗೊಂಡಿದೆ ಎಂಬುದನ್ನೂ ಚಿತ್ರತಂಡ ವಿವರಿಸಿದೆ.
ಯು/ಎ ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಿದ್ಧವಿರುವ ಈ ಚಿತ್ರವನ್ನು ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ನಿರ್ಮಿಸಿದ್ದಾರೆ.
ಆರ್.ವಿನೋದ್ ಛಾಯಾಗ್ರಹಣ, ನಿತೀಶ್ ಕುಮಾರ್ ಸಂಗೀತ ಚಿತ್ರಕ್ಕಿದೆ.