Snehapriya.com

June 8, 2025

ಪ್ರೀತಿಗಿಲ್ಲಿ ಲೆಕ್ಕಾಚಾರ..

Social Share :

ಪ್ರೀತಿ ಪ್ರೇಮಕ್ಕೆ ಯಾವ ಲೆಕ್ಕಾಚಾರವಿದೆ.. ಅದು ಸುಮ್ಮನೆ ಹೃದಯಕ್ಕೆ ಎಡ ತಾಗಿ ಆಮೇಲೆ ಕಾಡಿಸುವ ಸ್ಥಿತಿ ಅಥವಾ ಆಹ್ಲಾದವನ್ನೂ ನೀಡಬಹುದು..

ಆದರೆ ಪ್ರೀತಿ ಪ್ರೇಮದ ಲೆಕ್ಕಾಚಾರ ಹಾಕುವುದು ಮುಖ್ಯ ಎಂದು ಹೇಳಿದ್ದು ಹೊಸಬರ ತಂಡ.. ಚಿತ್ರದ ಹೆಸರೂ ಲೆಕ್ಕಾಚಾರ. ಎರಡು ಹಾಡುಗಳು ಹಾಗೂ ಟೀಸರ್ ಜೊತೆ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.

ಹರೀಶ್ ಹಾಗೂ ಯಶಸ್ವಿ ಆರ್.ಸಿ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದು, ಎಂ.ರಾಜ್ ನಿರ್ದೇಶಕ ಹಾಗೂ ಚಂದ್ರು. ಆರ್ ನಿರ್ಮಾಪಕ. ಹಾಗೆಯೇ ಅರೇನ್ ಕಾರ್ತಿಕ್ ಸಂಗೀತ ನೀಡಿದ್ದಾರೆ.

ಅದು ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಚಿತ್ರತಂಡ ಹೊಸಬರದು.. ಅವರು ಮಾತಿನಲ್ಲೂ ಹೊಸಬರು.. ಹಾಗಾಗಿ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಬರಲಿಲ್ಲ. ಆದರೆ ಸಂಗೀತ ನಿರ್ದೇಶಕ ಅರನ್ ಕಾರ್ತಿಕ್ ಸ್ವಲ್ಪ ಮಟ್ಟಿನ ವಿವರಗಳನ್ನು ನೀಡಿದರು.

ನಟ ಸ್ವಸ್ತಿಕ್ ಶಂಕರ್, ಗಾಯಕಿ ಸಮನ್ವಿತಾ ಶರ್ಮ ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *