ಇದು ಆಕಸ್ಮಿಕವೋ.. ಅಥವಾ ದೇವರ ಸಂಕಲ್ಪವೋ.. ಡಾ.ಪುನೀತ್ ರಾಜ್ ಕುಮಾರ್ ದೇವರಾಗಿ ನಟಿಸಿದ್ದಾರೆ..
ಅದೇ ಲಕ್ಕಿಮ್ಯಾನ್..!
ಭಾರತೀಯ ಚಿತ್ರರಂಗದ ಮೈಕೆಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದ ಮುಖ್ಯ ಆಕರ್ಷಣೆ ಎಂದರೆ ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ಒಟ್ಟಿಗೆ ಮಾಡಿರುವ ಡ್ಯಾನ್ಸ್..
ಹಾಗೆಯೇ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವುದು ‘ಲವ್ ಮಾಕ್ ಟೈಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ. ಜೊತೆಗೆ ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಇದ್ದಾರೆ.
ಲಕ್ಕಿಮ್ಯಾನ್ ಬಿಡುಗಡೆಗೆ ಸಜ್ಜಾಗಿರುವ ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ನಿರ್ದೇಶಕ ನಾಗೇಂದ್ರ ಪ್ರಸಾದ್ ಚಿತ್ರದ ಆಶಯಗಳ ಬಗ್ಗೆ ವಿವರಿಸುವಾಗ ಈ ಚಿತ್ರ ಮಾಡಲು ಮುಖ್ಯ ಕಾಣಕರ್ತರೇ ಅಪ್ಪು ಸರ್ ಎಂದರು.
ಅವರ ಪಾತ್ರ ಸುಮಾರು 45 ನಿಮಿಷಗಳಷ್ಟಿದೆ. ಈ ಸಂದರ್ಭದಲ್ಲಿ ನನ್ನ ಅಣ್ಣ ಪ್ರಭುದೇವ ಮತ್ತು ಅಪ್ಪು ಸರ್ ಡ್ಯಾನ್ಸ್ ಮುಖ್ಯ ಆಕರ್ಷಣೆ ಎಂದರೆ ತಪ್ಪಲ್ಲ. ಆದರೆ ಅಪ್ಪು ಸರ್ ಇಲ್ಲ ಎಂಬ ನೋವು ನಮ್ಮನ್ನು ಬಹಳಷ್ಟು ಕಾಡಿದೆ ಎಂದರು ನಾಗೇಂದ್ರ ಪ್ರಸಾದ್.
ಕೊರೊನಾ ಲಾಕ್ ಡೌನ್ ಇಂತಹ ಸಂಕಷ್ಟಗಳನ್ನು ದಾಟಿ ಈಗ ಬಿಡುಗಡೆಗೆ ಚಿತ್ರ ಸಜ್ಜಾಗಿದೆ. ಇದು ತಮಿಳು ಚಿತ್ರ. ಅದನ್ನು ನೋಡಿಯೇ ಪುನೀತ್ ಸರ್ ಒಪ್ಪಿದ್ದರು. ಬಳಿಕ ಮುಖ್ಯ ಪಾತ್ರಕ್ಕೆ ಡಾರ್ಲಿಂಗ್ ಕೃಷ್ಣ ಆಯ್ಕೆಯಾದರು ಎಂದರು.
ನಾನು ‘ಹುಡುಗರು’, ‘ಜಾಕಿ’ ಚಿತ್ರಗಳಲ್ಲಿ ಅಪ್ಪು ಸರ್ ಜೊತೆ ನಟಿಸಿದ್ದೇ.. ಅದೆಲ್ಲವೂ ಚಿಕ್ಕ ಪಾತ್ರಗಳಾಗಿದ್ದವು. ಈ ಚಿತ್ರ ಅದೃಷ್ಟ ಎಂದು ಭಾವಿಸಿದ್ದೇ.. ಆದರೆ ನಿಜಕ್ಕೂ ಇದು ಅದೃಷ್ಟವೇ ಎಂದು ಈಗ ಪ್ರಶ್ನಿಸಿಕೊಳ್ಳುವಂತಾಗಿದೆ ಎಂದರು ಡಾರ್ಲಿಂಗ್ ಕೃಷ್ಣ.
ನಟಿಯರಾದ ಸಂಗೀತ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿಕೊಂಡರು.
ಪಿಆರ್ ಕೆ ಪ್ರೊಡಕ್ಷನ್ ನ ‘ಕವಲು ದಾರಿ’ ನನ್ನ ಮೊದಲ ಚಿತ್ರ ಎಂದರು ರೋಷನಿ.
ನಿರ್ಮಾಪಕ ಕಾಮರಾಜ್ ಹೆಚ್ಚು ಮಾತನಾಡಲಿಲ್ಲ. ಹಾಡುಗಳನ್ನು ಬರೆದಿರುವ ಧನಂಜಿ ರಂಜನ್ ಈ ಸಂದರ್ಭದಲ್ಲಿ ಹಾಜರಿದ್ದರು.