Snehapriya.com

June 9, 2025

ಜಾಸ್ ಸ್ಟುಡಿಯೋ ಕ್ಯಾಟ್ ವಾಕ್ ಹೊಸ ಫ್ಯಾಷನ್ ಯುಗಕ್ಕೆ ನಾಂದಿ

Social Share :

ಕೋಮಲ ಮೈಮಾಟ, ವೈಯಾರದ ನಡಿಗೆ, ಆಕರ್ಷಕ ಮಾತುಗಳು, ಚಮತ್ಕಾರದ ನಡೆ ಇವೆಲ್ಲವೂ ಒಬ್ಬ ಮಹಿಳೆಯಲ್ಲಿ ಇದ್ದರೆ ಎಷ್ಟು ಚೆಂದ..!

ಹೌದು ಹೆಣ್ಣು ಎಂದರೆ ಕೋಮಲೆ, ಚಂಚಲೆ ಮತ್ತು ವೈಯಾರಿ‌. ಕೆಲವರಲ್ಲಿ ಸಮ್ಮೋಹನಗೊಳಿಸುವ ಕಲೆ ತಾನಾಗೇ ಬಂದಿರುತ್ತದೆ..

ಆದರೆ ಹೆಣ್ಣಿನ ಅನೇಕ ಸಕಾರಾತ್ಮಕ ಗುಣಗಳನ್ನು ಪತ್ತೆ ಹಚ್ಚಲು ಒಂದು ಮಹತ್ವದ ವೇದಿಕೆ ಬೇಕಾಗಿರುತ್ತದೆ. ಅದು ಫ್ಯಾಷನ್ ಶೋ ಅಥವಾ ಪ್ರದರ್ಶನ ಕೂಡ ಆಗಿರಬಹುದು‌.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ; ಕಳೆದ ಭಾನುವಾರ ಉದ್ಯಾನನಗರಿ ಬೆಂಗಳೂರಿನ ಸ್ಟಾರ್ ಹೊಟೇಲ್ ಒಂದರಲ್ಲಿ ಲಲನೆಯರು ತುಂಬಿ ತುಳುಕಿದರು. ಅದು ಜ್ಯೋತ್ಸಾ ವೆಂಕಟೇಶ್ ಮತ್ತು ಸಬರೇಷ್ ಬಾಲಕೃಷ್ಣನಾಯ್ಡು ಸಾರಥ್ಯದ ಜಾಸ್ ಸ್ಟುಡಿಯೋ ಆಯೋಜಿತ ಕಾರ್ಯಕ್ರಮ.

ಅನೇಕ ಭಾಗಗಳಿಂದ ಬಂದಿದ್ದ ಕಿರಿಯ ಮತ್ತು ಹಿರಿಯ ವಯಸ್ಸಿನ ಮಹಿಳೆಯರು ಅಲ್ಲಿ ಭಾಗವಹಿಸಿದ್ದರು. ‘ಮಿಸ್ ಅಂಡ್ ಮಿಸಸ್ ಕರ್ನಾಟಕ 2021’ ಅಡಿಷನ್ ಸ್ಪರ್ಧೆಯಲ್ಲಿ ಪಾಲ್ಗೋಳಲು ಇದು ಅವಕಾಶವಾಗಿತ್ತು.

ಕೊರೊನಾ ಮಹಾಮಾರಿಯ ಹೊಡೆತದ ಹಿನ್ನೆಲೆಯಲ್ಲಿ ಮನರಂಜನಾ ಕ್ಷೇತ್ರಕ್ಕೆ ಪೆಟ್ಟು ಬಿದ್ದಿರುವುದು ನಿಜ. ಅದರ ಭಾಗವಾಗಿರುವ ಫ್ಯಾಷನ್ ಕ್ಷೇತ್ರವೂ ಪಿಡುಗು ಹಿನ್ನೆಲೆಯಲ್ಲಿ ಬಡವಾಗಿದೆ ಎಂದರೆ ತಪ್ಪಲ್ಲ.. ಈ ಹಿನ್ನೆಲೆಯಲ್ಲಿ ಫ್ಯಾಷನ್ ಕ್ಷೇತ್ರದ ಚೇತರಿಕೆಯ ಸಲುವಾಗಿ ಏರ್ಪಡಿಸಿದ ಕಾರ್ಯಕ್ರಮ ಇದಾಗಿತ್ತು.

ವಿಶೇಷವೆಂದರೆ ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹತ್ತು ಮಂದಿ ಜ್ಯೂರಿಗಳಾಗಿ ಭಾಗವಹಿಸಿದ್ದು. ಈ ಪೈಕಿ ಇಬ್ಬರು ಮಂಗಳ ಮುಖಿಯರು. ನೀತೂ.ಆರ್.ಎಸ್ ಹಾಗೂ ಅಮಿತ್‌ಪಾಂಡ್ಯ ತಮ್ಮ ಅಪೂರ್ವ ಅನುಭವಗಳ ಹಿನ್ನೆಲೆಯಲ್ಲಿ ಫ್ಯಾಷನ್ ಸೊಬಗಿನಲ್ಲಿ ಮಿಂದು ಎದ್ದವರು. ಇಲ್ಲಿ ತೀರ್ಪುಗಾರರಾಗಿ ವಿಶೇಷತೆಗಳನ್ನು ಹಂಚಿಕೊಂಡರು ಮತ್ತು ಕಿರಿಯರಿಗೆ ಮಾರ್ಗದರ್ಶನ ನೀಡಿದರು. ಬೆಂಗಳೂರು, ಮೈಸೂರು, ಮೂಡಬಿದಿರೆ, ತಿರುಪತಿ, ತ್ರಿಪುರ, ಶಿಲಾಂಗ್ ಇನ್ನು ಮುಂತಾದ ಕಡೆಗಳಿಂದ 115 ಸ್ಪರ್ಧಿಗಳು ಆಗಮಿಸಿದ್ದರು. 60 ಮಿಸ್ ಸುಂದರಿಯರು, 55 ಮಿಸಸ್ ನೀರೆಯರು ಭಾಗವಹಿಸಿದ್ದರು. ಎರಡು ವಿಭಾಗಗಳಿಂದ ಆಯ್ಕೆಯಾಗಲಿರುವ 12 ಸುಂದರಿಯರನ್ನು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗ್ರ್ಯಾಂಡ್ ರ‍್ಯಾಂಪ್ ವಾಕ್‌ದಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಜ್ಯೋತ್ಸಾ ವೆಂಕಟೇಶ್ ವಿವರ ನೀಡಿದರು.
ನಟ ಅಭಯ್‌ವೀರ್, ಮಜಾ ಟಾಕೀಸ್ ಖ್ಯಾತಿಯ ಗಾಯಕಿ ರೆಮೋ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *