ನವರಸ ನಾಯಕ ಜಗ್ಗೇಶ್ ಹಾಗೂ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ‘ತೋತಾಪುರಿ-2’ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದ್ದು, ಇದೇ ಆಗಸ್ಟ್ 11ರಂದು ಬಿಡುಗಡೆ ಕಾಣುತ್ತಿದೆ.
ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ‘ತೋತಾಪುರಿ-2’ ನ್ನು ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ದತೆ ಗಳಾಗಿವೆ ಎಂದು ಚಿತ್ರದ ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.
ಮುಖ್ಯವಾಗಿ ಆಗಸ್ಟ್ 10 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿರುವ ‘ಜೈಲರ್ ‘ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಕನ್ನಡದ ಯಾವುದೇ ಚಿತ್ರಗಳು ಬಿಡುಗಡೆ ಘೋಷಿಸಿಕೊಂಡಿರಲಿಲ್ಲ..
ಆದರೆ ತೋತಾಪುರಿ-2 ಬಿಡುಗಡೆಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲವೆಂದು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ.
ತೋತಾಪುರಿ ಮೊದಲ ಭಾಗದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಈಗ ಅವರ ಪಾತ್ರ ಮುಂದುವರಿಯಲಿದೆ. ಜೊತೆಗೆ ಸುಮನ್ ರಂಗನಾಥ್ ಅವರ ಪಾತ್ರವೇ ಪ್ರಧಾನವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯವಾಗಿದೆ.
ಜಗ್ಗೇಶ್ ಇತರ ಕಲಾವಿದರ ಮುಂದುವರಿಕೆಯೂ ಇರಲಿದೆ. ಈ ಭಾಗದಲ್ಲಿ ಸಾಮರಸ್ಯ ಜೀವನ ಅಭಿವ್ಯಕ್ತಿಗೊಳ್ಳಲಿದೆ ಎಂಬುದು ನಿರ್ದೇಶಕ ವಿಜಯಪ್ರಸಾದ್ ಅವರ ಅನಿಸಿಕೆ.