ಜಾಡಘಟ್ಟ ಈ ವಾರ ಬಿಡುಗಡೆ ಕಾಣುತ್ತಿದೆ. ಸಂಪೂರ್ಣ ಹೊಸಬರಿಂದ ಕೂಡಿದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗ್ರಾಮ. ಅದರ ಹೆಸರಿಟ್ಟು ಚಿತ್ರ ಮಾಡುತ್ತಿರುವ ತಂಡಕ್ಕೆ ಊರಿನಲ್ಲಿ ನಡೆದಿರುವ ಸತ್ಯ ಘಟನೆಗಳೇ ಸ್ಫೂರ್ತಿ..
ಈ ಹಿಂದೆ ಕೆಲವು ಚಿತ್ರಗಳಿಗೆ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ಎಸ್.ರಘು ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿರುವುದೂ ಅಲ್ಲದೆ ಸಂಕಲನ ಮತ್ತಿತರ ಇತರ ತಾಂತ್ರಿಕ ವಿಷಯಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದಾರೆ. ರಘು ಅವರಿಗೆ ಸಹೋದರಿ ಶಶಿಮಣಿ ಚಿತ್ರ ನಿರ್ಮಾಣದ ಹೊಣೆ ಹೊತ್ತು ಸಹಕಾರ ನೀಡಿದ್ದಾರೆ.
ನಾವು ಒಂದು ತಂಡ ಕಟ್ಟಿಕೊಂಡು ಈ ಸಿನಿಮಾ ಮಾಡಿ ಮುಗಿಸಿದ್ದೇವೆ. ರಘು ನನ್ನ ತಮ್ಮ ಅವನಿಗೆ ಸಹಕಾರ ನೀಡುವ ಆಶಯ ಮುಖ್ಯವಾಗಿತ್ತು. ತಂಡದ ಎಲ್ಲಾ ಸದಸ್ಯರು ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮ ಸಹಕಾರ ನೀಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ಮಾಪಕಿ ಶಶಿಮಣಿ.
ಅಭಿಷೇಕ್ ಜಿ.ರಾಯ್ ಸಂಗೀತ ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆ ಹಾಡುಗಳಿಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ ಎಂಬ ವಿವರ ಕೊಟ್ಟರು.
ಜಾಡುಘಟ್ಟ ಎಂಬ ಅದೇ ಊರಿನಲ್ಲಿ ಕುಳಿತು ಕಥೆ ಬರೆಯುವಾಗ ಲಾಕ್ ಡೌನ್ ಆಯ್ತು. ಅದು ಹೆಚ್ಚಿನ ಸಮಯ ಒದಗಿಸಿಕೊಟ್ಟಿತು. ಲವ್ ಸೆಂಟಿಮೆಂಟ್ ಫೈಟ್ ನಿಜ ಘಟನೆಗಳು ಚಿತ್ರದಲ್ಲಿವೆ. ಅಕ್ಕ ಸಹ ಪಾತ್ರ ಮಾಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕ ರಘು ಎಸ್.
ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಜಯ್ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಚಿತ್ರಮಂದಿರ ಸಂಪೂರ್ಣ ಭರ್ತಿ ಇರದಿದ್ದರೂ ಬಿಡುಗಡೆ ಮಾಡುವ ಅನಿವಾರ್ಯತೆ ಇದೆ ಎಂಬುದಾಗಿ ಹೇಳಿಕೊಂಡಿತು ಚಿತ್ರತಂಡ.
ಛಾಯಾಗ್ರಾಹಕ ಪ್ರದೀಪ್ ಜೈನ್, ನಟ ಮಾವಳ್ಳಿ ರಮೇಶ್, ಮಹದೇವ್, ಧನ್ಯಶ್ರೀ, ಗಾಯಕ ದೇವರಾಜ್ ತಮ್ಮ ಅನುಭವಗಳನ್ನು ಹೇಳಿಕೊಂಡರು.