ಅದು ರಂಗು ರಂಗಾದ ಅದ್ದೂರಿತನವೇ ಮೈವೆತ್ತ ಸ್ಥಳ. ಅಲ್ಲಿ ಎಲ್ಲರ ಕಣ್ಕುಕ್ಕುವಂತಹ ತಾರೆಗಳ ಸಂಭ್ರಮ..
ಕನ್ನಡದ ಹೆಸರಾಂತ ನಟಿ ಹರ್ಷಿಕಾ ಪೂಣಚ್ಚ ಈಚೆಗೆ (ಮೇ 1)ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆ ಕ್ಷಣದಲ್ಲಿ ಸಂಭ್ರಮ ಮೇಳೈಸಿತ್ತು.
ನಟ ರಮೇಶ್ ಅರವಿಂದ್ ದಂಪತಿ, ಮಾಜಿ ಸಚಿವ ರೋಷನ್ ಬೇಗ್, ಭುವನ್ ಪೊನ್ನಣ್ಣ, ದಿಗಂತ್, ಗುರುಕಿರಣ್, ಜೆ.ಕೆ, ಶಿಲ್ಪಾ ಗಣೇಶ್, ಸೌಂದರ್ಯ ಜಗದೀಶ್, ಭುವನ್ ಗೌಡ ಹೀಗೆ ಗಣ್ಯತಿ ಗಣ್ಯರ ಸಾಲು ಸಾಲು..
ಹಾಗೆಯೇ ಕಣ್ಮನ ತಣಿಸುವ ಬಣ್ಣ ಬಣ್ಣದ ಅಲಂಕಾರದ ಜೊತೆಗೆ ವಿವಿಧ ಪೋಷಾಕಿನೊಂದಿಗೆ ಕಾಣಿಸಿಕೊಂಡ ಲಲನೆಯರು ಗಮನ ಸೆಳೆದರು.
ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷ ಈ ಸಮಯ ಕೂಡಿ ಬಂತು ಎಂದರು ಹರ್ಷಿಕಾ.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ, ಕೊಂಕಣಿ, ಕೊಡವ ಹೀಗೆ ಏಳು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ ಈಗ ಭೋಜಪುರಿ ಚಿತ್ರಗಳಲ್ಲಿ ಹೆಚ್ಚು ಬ್ಯುಜಿಯಾಗಿದ್ದಾರೆ. ಹಾಗಾಗಿ ಆ ಚಿತ್ರರಂಗದ ಗೆಳೆಯರು ಹೆಚ್ಚಾಗಿದ್ದರು.