ವರ್ಷಾರಂಭದಲ್ಲಿ ಸಿನಿ ಪ್ರಿಯರನ್ನು ರಂಜಿಸಲು ಸಿದ್ಧಗೊಂಡಿರುವ ಚಿತ್ರದ ಹೆಸರು ಸ್ಫೂಕಿ ಕಾಲೇಜು..
ವಿಭಿನ್ನ ವಿಶೇಷ ಆಯ್ಕೆಗಳ ಜೊತೆ ಜೊತೆಗೆ ಭಯಪಡಿಸಲು ಸಿದ್ಧವಾಗಿರುವ ಸ್ಫೂಕಿ ಕಾಲೇಜು ಆವರಣದಲ್ಲಿ ಮಿಂದೆದ್ದವರ ಸ್ಫೂರ್ತಿ ಅದಕ್ಕಿಂತ ಮಿಗಿಲಾಗಿ ಇತ್ತು.
ಅದು ಚಿತ್ರದ ಬಿಡುಗಡೆ ಪೂರ್ವ ವರ್ಣರಂಜಿತ ಸಮಾರಂಭವಾಗಿತ್ತು.
ಚಿತ್ರದ ಮುಖ್ಯ ಪಾತ್ರದಲ್ಲಿರುವ ವಿವೇಕ್ ಸಿಂಹ ಹಾಗೂ ಖುಷಿ ರವಿ ಅವರಂತೂ ಸಿನಿಮಾ ಮತ್ತು ಅದರ ಅನುಭವಗಳನ್ನು ಹೇಳುವಾಗ ಅತ್ಯಂತ ಉಲ್ಲಾಸ ಮತ್ತು ಉತ್ಸಾಹದಲ್ಲಿ ಇದ್ದಂತೆ ಕಂಡು ಬಂದಿತು..
ಪ್ರೀಮಿಯರ್ ಪದ್ಮಿನಿ ಹಾಗೂ ಇತರ ಚಿತ್ರಗಳಲ್ಲಿ ನಟಿಸಿದ್ದ ವಿವೇಕ್ ಸಿಂಹ ಅವರಿಗೆ ಇದು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಮೊದಲ ಚಿತ್ರ.
ಖುಷಿ ರವಿ ಅವರಿಗೆ ಈ ಮುಂಚೆ ‘ದಿಯಾ’ ಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆ.
ನಾವು ಭಯಪಡಿಸಲು ಬರ್ತಾ ಇದ್ದೀವಿ ಎಂದೇ ಹೇಳಿಕೊಂಡಿತು ಜೋಡಿ.. ಭಯ ಪಡಿಸುವ ಸನ್ನಿವೇಶಗಳ ಜೊತೆ ಜಾಗೃತಿ ಮೂಡಿಸಬಲ್ಲ ವಿಷಯಗಳೂ ಇವೆ ಎಂಬ ವಿವರ ಬಂದಿತು ಅವರಿಂದ..
‘ರಂಗೀತರಂಗ’ ಖ್ಯಾತಿಯ ಎಚ್.ಕೆ.ಪ್ರಕಾಶ್ ನಿರ್ಮಾಣದ ‘ಸ್ಫೂಕಿ ಕಾಲೇಜು’ ಚಿತ್ರದಲ್ಲಿ ವಿಶೇಷಗಳು ಬಹಳಷ್ಟಿವೆ.. ಮುಖ್ಯವಾಗಿ ಅತ್ಯಂತ ಜನಪ್ರಿಯ ಗೀತೆ ‘ ವೀರಕೇಸರಿ’ ಚಿತ್ರದ ‘ಮೆಲ್ಲುಸಿರೇ ಸವಿಗಾನ..’ ರೀಮಿಕ್ಸ್ ಮಾಡಿರುವುದು ಮತ್ತು ಅದರಲ್ಲಿ ‘ಏಕ್ ಲವ್ ಯಾ’ ಖ್ಯಾತಿಯ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿರುವುದು ಬಹಳವೇ ವಿಶೇಷವಾಗಿದೆ.
ತಂತ್ರಜ್ಞಾನದ ವಿಷಯದಲ್ಲಿ ನಿರ್ದೇಶಕ ಭರತ್ ಜಿ ಅವರಿಗೆ ಅಪಾರ ಅನುಭವ ಮತ್ತು ಪ್ರೀತಿ ಹಾಗಾಗಿ ಇದೊಂದು ತಾಂತ್ರಿಕ ಅಬ್ಬರ ಒಳಗೊಂಡಿರುವ ಚಿತ್ರ.
ಅಲ್ಲದೆ ಮನೋಹರ್ ಜೋಷಿ ಕ್ಯಾಮೆರಾ, ಪ್ರಜ್ವಲ್ ಗ್ರಾಫಿಕ್ಸ್ ಹಾಗೂ ಇನ್ನಿತರರ ಚಮತ್ಕಾರದಿಂದ ಇದೆಲ್ಲಾ ಸಾಧ್ಯವಾಗಿದೆ ಎಂಬುದಾಗಿ ಚಿತ್ರತಂಡ ಹೇಳಿಕೊಂಡಿತು.
ನಿರ್ಮಾಣ ತಂಡದಲ್ಲಿರುವ ನಂಜೇಗೌಡ, ಮಹೇಶ್, ಸುಭಾಷಿಣಿ, ಕಲಾವಿದರಾದ ರಘು ರಾಮನ ಕೊಪ್ಪ, ವಿಜಯ್ ಚೆಂಡೂರ್, ಶೃತಿ
ರಾಕೇಶ್ ಪೂಜಾರಿ, ಸುಧೀಂದ್ರ,
ಅಜಯ್ ಪೃಥ್ವಿ ಹಾಗೂ ಶರಣ್ಯ ಶೆಟ್ಟಿ
ಚಿತ್ರೀಕರಣ ಸಂದರ್ಭ ಹಾಗೂ ಪಾತ್ರದ ವಿವರ ನೀಡಿದರು.