ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ನಿರ್ದೇಶನದ ಹಾಗೂ ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಮಾರಕಾಸ್ತ್ರ’ ಇದೇ ಶುಕ್ರವಾರ ಬಿಡುಗಡೆ ಕಾಣುತ್ತಿದೆ.
ಕೋಮಲ್ ಹಾಗೂ ನಟರಾಜ್ ನಿರ್ಮಾಣದ ಈ ಚಿತ್ರ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿ ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ಹಾಕಿಕೊಂಡಿತ್ತು.
ಮಾಲಾಶ್ರೀ ಅವರು ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಜೊತೆಗೆ ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಅಲ್ಲದೆ ಮಾಲಾಶ್ರೀ ಅವರ ಅಪ್ರತಿಮ ಹೊಡೆದಾಟದ ದೃಶ್ಯಗಳಿವೆ. ಹಾಗಾಗಿ ಚಿತ್ರವು ವ್ಯಾಪಾರದ ಹಾದಿಯಲ್ಲಿ ಲಾಭದಾಯಕ ಅಂಶಗಳನ್ನು ನೋಡಿದೆ.
ಅಂದ ಹಾಗೆ ಚಿತ್ರವು ಪರಭಾಷೆ ಡಬ್ಬಿಂಗ್ ಹಕ್ಕು ಮಾರಾಟದಲ್ಲಿ ಲಾಭ ಮಾಡಿಕೊಂಡಿದೆ. ಹಿಂದಿ ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿದೆ. ಚಿತ್ರದ ಬಗ್ಗೆ ಅಪಾರ ವಿಶ್ವಾಸವನ್ನು ಚಿತ್ರ ತಂಡ ಹೊಂದಿದೆ.
ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರದಲ್ಲಿ ನೃತ್ಯ ನಿರ್ದೇಶಕ ಧನುಕುಮಾರ್ ಸಹ ಕಾರ್ಯಕಾರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆನಂದ್ ಆರ್ಯ, ಹರ್ಷಿಕಾ ಪೂಣಚ್ಚ, ಅಯ್ಯಪ್ಪ ಹೀಗೆ ತಾರಾಬಳದಲ್ಲಿ ಹೆಸರಾಂತ ಕಲಾವಿದರಿದ್ದಾರೆ.