Snehapriya.com

June 8, 2025

ಗಣೇಶ್ ತ್ರಿಬಲ್ ರೈಡಿಂಗ್ ರಂಜನೆ ಮನರಂಜನೆ..

Social Share :

‌ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿರುವ ‘ತ್ರಿಬಲ್ ರೈಡರ್’ ಇದೇ ವಾರ ಅಂದರೆ ನವೆಂಬರ್ 25ರಂದು ಬಿಡುಗಡೆ ಕಾಣುತ್ತಿದೆ..

ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದ ಭರಟೆ ಜೋರಾಗಿದ್ದು, ಈಚೆಗೆ ಚಿತ್ರದ ಬಿಡುಗಡೆ ಪೂರ್ವ ಅದ್ದೂರಿ ಸಮಾರಂಭದಲ್ಲಿ ಮುಖ್ಯ ಪಾತ್ರದಲ್ಲಿರುವ ಗಣೇಶ್ ಸೇರಿದಂತೆ ಕಲಾವಿದರು ಚಿತ್ರದ ವಿವರಗಳನ್ನು ನೀಡಿದರು.

ಚಿತ್ರದಲ್ಲಿ ನಕ್ಕು ನಗಿಸುವ ಮತ್ತು ಒಂದು ಉತ್ತಮ ಸಂದೇಶ ನೀಡುವ ವಿಷಯಗಳಿವೆ. ಹಾಡುಗಳು ಈಗಾಗಲೇ ಜನಮನ ತಲುಪಿ ಕಚಗುಳಿ ಇಟ್ಟಿವೆ ಎಂಬ ವಿವರಗಳನ್ನು ನೀಡಿದರು ನಿರ್ಮಾಪಕ ವೈ.ಎಂ.ರಾಮ್ ಗೋಪಾಲ್.

ಈ ಪ್ರಯತ್ನಕ್ಕೆ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾಗಿ ಮೂವರಿದ್ದಾರೆ. ಅದಿತಿ ಪ್ರಭುದೇವ, ರಚನಾ ಹಾಗೂ ಮೇಘಶೆಟ್ಟಿ ಚಿತ್ರದಲ್ಲಿದ್ದಾರೆ. ಆದರೆ ಮೂವರ ಪಾತ್ರ ಏನೆಂಬುದನ್ನು ತಿಳಿಯಲು ಚಿತ್ರ ನೋಡಬೇಕು ಎಂದರು.

ಇದು ಕೊಂಚ ದೂರ ಎಳೆದರೂ ಖುಷಿ ಕೊಡುವ ಚಿತ್ರ ಎಂದರು ಗೋಲ್ಡನ್ ಸ್ಟಾರ್ ಗಣೇಶ್. ಸಾಧುಕೋಕಿಲ ಸಹ ಚಿತ್ರದ ಉತ್ತಮ ಆಶಯಗಳ ಬಗ್ಗೆ ತಿಳಿಸಿದರು.

ಅದಿತಿ ಪ್ರಭುದೇವ, ಮೇಘ ಶೆಟ್ಟಿ
ರಚನಾ ಇಂದಿರ್, ರವಿಶಂಕರ್ ಗೌಡ,
ಛಾಯಾಗ್ರಾಹಕ ಜೈ ಆನಂದ್ ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡರು.

ಚಿತ್ರದ ಒಂದು ಹಾಡಿಗೆ ಇಡೀ ತಂಡ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *