Snehapriya.com

June 9, 2025

ಸದ್ದಿಲ್ಲದೆ ಸಿದ್ಧವಾದ ಮಾರ್ಟಿನ್ ಹಣ ನೀಡಿ ಟೀಸರ್ ನೋಡಿರಿ..

Social Share :

ಧ್ರುವ ಸರ್ಜಾ ಮುಖ್ಯ ಪಾತ್ರದಲ್ಲಿರುವ ಎ.ಪಿ.ಅರ್ಜುನ್ ನಿರ್ದೇಶನದ ಮತ್ತು ಉದಯ್ ಮೆಹ್ತಾ ನಿರ್ಮಾಣದ ‘ಮಾರ್ಟಿನ್’ ತನ್ನ ಡಿಸೈನ್ ಮತ್ತು ಮೇಕಿಂಗ್ ಗಳಿಂದ ಕುತೂಹಲ ಹುಟ್ಟು ಹಾಕಿದೆ.

ಇದೀಗ ಮಾಧ್ಯಮಗಳ ಮುಂದೆ ಬಂದಿರುವ ಈ ಮೂವರು ಪ್ರಮುಖರು ಮಾರ್ಟಿನ್ ಚಿತ್ರದ ಅನಂತ ಸಾಧ್ಯತೆಗಳನ್ನು ವಿವರಿಸಿದ್ದಾರೆ.

ಆದರೆ ಮಾರ್ಟಿನ್ ಚಿತ್ರ ಒಂದು ಝಲಕ್ ಬಗ್ಗೆ ತಿಳಿಯಬೇಕೆಂದರೆ ಫೆ.23ರವರೆಗೆ ಕಾಯಬೇಕು. ಬಳಿಕ ಹಣ ತೆತ್ತು ಅದನ್ನು ನೋಡಬೇಕು. ಇದು ಕನ್ನಡದಲ್ಲಿ ಮೊದಲ ಪ್ರಯೋಗ ಪೇಯ್ಡ್ ಪ್ರೆಮೋಷನ್ ಎಂದವರು ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ.

ಪೋಸ್ಟರ್ ಬಿಡುಗಡೆಯ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಅವರ ಜೊತೆಗೂಡಿ ಮಾಧ್ಯಗಳ ಮುಂದೆ ಬಂದು ಪ್ರಶ್ನೆಗಳಿಗೆ ಉತ್ತರಿಸುವಾಗ ಎಲ್ಲಿಯೂ ಚಿತ್ರದ ಎಳೆಯನ್ನು ಬಿಟ್ಟು ಕೊಡಲಿಲ್ಲ; ಹೋಗಲಿ ಇದು ಸೇನಾ ಆಧಾರಿತ ಚಿತ್ರವೇ ಎಂಬುದಕ್ಕೆ ಕಾದು ನೋಡಿ ಎಂದರು.

ಇದೇ 23ರಂದು ವೀರೇಶ್ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಕಾಣುತ್ತದೆ. ಅದನ್ನು ನೋಡಲು ಬಯಸುವವರು ಆನ್ ಲೈನ್ ನಲ್ಲಿ ಬುಕ್ ಮಾಡಿ ಬರಬೇಕು. ಮಾಧ್ಯಮಗಳಿಗೂ ಅಲ್ಲಿ ಅವಕಾಶ ಇದೆ ಎಂದರು ನಿರ್ಮಾಪಕರು.

ಕೊರೊನಾ ಕಾಲದಲ್ಲಿ ಆರಂಭವಾದ ಈ ಚಿತ್ರ ಬರಬರುತ್ತಾ ದೊಡ್ಡದಾಗಿ ಹೋಯಿತು. ಈಗ ಪ್ಯಾನ್ ಇಂಡಿಯಾ ಆಶಯಗಳ ಜೊತೆ ಸಿದ್ಧವಾಗಿದೆ. ಏಪ್ರಿಲ್ ನಂತರ ಬಿಡುಗಡೆಯ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು ನಿರ್ದೇಶಕ ಎ.ಪಿ.ಅರ್ಜುನ್.

ಈ ಚಿತ್ರಕ್ಕಾಗಿ ದೇಹ ಗಾತ್ರವನ್ನು ಹೆಚ್ಚು ಮಾಡಿಕೊಳ್ಳಬೇಕಾದ ಸಂದರ್ಭಗಳನ್ನು ವಿವರಿಸಿದರು ಧ್ರುವ ಸರ್ಜಾ. ಡೈಲಾಗ್ ಕಡಿಮೆ ಇರುವ ಮತ್ತು ಆಕ್ಷನ್ ಹೆಚ್ಚಾಗಿರುವ ಈ ಚಿತ್ರದ ಬಗ್ಗೆ ಹೆಚ್ಚು ಏನೇ ತಿಳಿಯಲು ಟೀಸರ್ ಉತ್ತರ ಕೊಡುತ್ತದೆ ಎಂದರು.

ಮಾರ್ಟಿನ್ ಪೋಸ್ಟರ್ ಎಲ್ಲರ ಮನ ಗೆದ್ದಿರುವಂತೆ ಟೀಸರ್ ಗೆಲ್ಲುತ್ತದೆ. ಏಕೆಂದರೆ ಚಿತ್ರಕ್ಕೆ ಹಾಕಿರುವ ಪರಿಶ್ರಮ ಅತ್ಯಂತ ದೊಡ್ಡದು ಎಂದರು ನಿರ್ದೇಶಕರು.

ಚಿತ್ರದ ಛಾಯಾಗ್ರಾಹಕ ಸತ್ಯಹೆಗಡೆ ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *