* ತಳ ಸಮುದಾಯದ ಹೆಮ್ಮೆ
* ಅಪ್ರತಿಮ ಗ್ರಾಮೀಣ ಪ್ರತಿಭೆ
* ಸರ್ಕಾರಿ ಅಧಿಕಾರಿಯ ಪುತ್ರಿ
ಇದು ತಳ ಸಮುದಾಯದಿಂದ ಬಂದ ಯುವತಿಯೊಬ್ಬರ ಅದ್ವಿತೀಯ ಸಾಧನೆ ಮತ್ತು ಯಶೋಗಾಥೆ..
ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ (ಯು.ಎನ್.ಎಚ್.ಆರ್.ಸಿ.)ಗೆ ನೇಮಕವಾಗುವ ಮೂಲಕ
ಕೋಲಾರದ ಪುಟ್ಟ ಹಳ್ಳಿಯೊಂದರಿಂದ ಬಂದ ಅಧಿಕಾರಿಯೊಬ್ಬರ ಪುತ್ರಿ
ಡಾ.ಕೆ.ಪಿ.ಅಶ್ವಿನಿ ತಳ ಸಮುದಾಯ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ವಿಶ್ವಸಂಸ್ಥೆಯ ಈ ಪ್ರತಿಷ್ಠಿತ ಹುದ್ದೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆಯಾಗಿದ್ದಾರೆ ಎಂಬುದು ವಿಶೇಷ ಮತ್ತು ವಿರಳ ಸಂಗತಿಯಾಗಿದೆ.
ಕೋಲಾರ ತಾಲ್ಲೂಕಿನ ಕುರುಬರ ಹಳ್ಳಿ ಎಂಬ ಗ್ರಾಮದ ರಾಜ್ಯ ಸರ್ಕಾರಿ ಅಧಿಕಾರಿ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿಗಳ ಪುತ್ರಿಯಾಗಿರುವ ಅಶ್ವಿನಿ ಚಿಕ್ಕ ವಯಸ್ಸಿನಿಂದಲೂ ಓದಿನಲ್ಲಿ ಮುಂದು.. ಅಪ್ರತಿಮ ಪ್ರತಿಭಾವಂತೆಯಾಗಿರುವ ಇವರಿಗೆ ವಿಶ್ವ ಸಂಸ್ಥೆ ಮನ್ನಣೆ ದೊರೆತಿರುವುದು ಅವರ ಪರಿಶ್ರಮಕ್ಕೆ ದೊರೆತ ಫಲವಾಗಿದೆ.
ಅಶ್ವಿನಿ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪದವಿ ಹಾಗೂ ಸೇಂಟ್ ಜೊಸೆಫ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನವದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯ (ಜೆಎನ್ ಯು)ದಲ್ಲಿ ಎಂ.ಪಿಲ್, ಪಿ.ಎಚ್.ಡಿ ಪಡೆದ ಸಾಧಕಿ ಇವರಾಗಿದ್ದಾರೆ.
ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕಿಯಾಗಿ, ಸೆಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅಶ್ವಿನಿ, ಡಾ.ಬಿ.ಆರ್.ಅಂಬೇಡ್ಕರ್ ಸಿದ್ಧಾಂತಗಳ ಪ್ರತಿಪಾದಕರಾಗಿ ದಲಿತ ಚಳುವಳಿ ಹಾಗೂ ಆದಿವಾಸಿಗಳ ಹಕ್ಕು ಪ್ರತಿಪಾದನೆಯ ದಿಕ್ಕಿನಲ್ಲಿ ಹೋರಾಟ ಮಾಡಿದ್ದಾರೆ.
ಜಿನೀವಾ ಮೂಲದ 47 ಮಂದಿ ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಡಾ.ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದ್ದು, ಅವರು ವರ್ಣಭೇದ ಹಾಗೂ ಅಸಹಿಷ್ಣುಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಬೇಕಾಗಿದೆ.