Snehapriya.com

June 9, 2025

ರಾಜಯೋಗ ಧರ್ಮಣ್ಣ ಹಾಡಿಗೆ ಅಭಿಷೇಕ್ ಅಂಬರೀಷ್ ಮೆಚ್ಚುಗೆ

Social Share :

ಧರ್ಮಣ್ಣ ಮುಖ್ಯ ಪಾತ್ರದಲ್ಲಿರುವ ‘ರಾಜಯೋಗ’ ಚಿತ್ರದ ಹಾಡನ್ನು ನಟ ಅಭಿಷೇಕ್ ಅಂಬರೀಷ್ ಮೆಚ್ಚಿಕೊಂಡಿದ್ದಾರೆ.

‘ನಗಬೇಡ್ವೆ ನನ್ನ ಕಂಡು.. ನಾ ಬಿಎ ಮಾಡಿದ ಗಂಡು..’ ಎಂಬ ಹಾಡನ್ನು ಬಿಡುಗಡೆ ಮಾಡಿರುವ ಅಭಿಷೇಕ್ ಅಂಬರೀಷ್ ‘ರಾಜಯೋಗ’ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಲಿಂಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಈಚೆಗಷ್ಟೇ ಬಿಡುಗಡೆ ಕಂಡಿತ್ತು. ಇದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಇದರ ಬೆನ್ನಲ್ಲೇ ಈಗ ಹಾಡು ಬಿಡುಗಡೆ ಕಂಡಿದೆ. ಇದನ್ನು ಬಿಡುಗಡೆ ಮಾಡಿದ ಅಭಿಷೇಕ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದರಲ್ಲಿ ಧರ್ಮಣ್ಣ ಹಾಗೂ ನಿರೀಕ್ಷಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ‌. ಸಂಗೀತ ನಿರ್ದೇಶಕ ಅಕ್ಷಯ್ ರಿಶಭ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಹಾಡನ್ನು ವಿಶೇಷವಾಗಿ ನವಜೊಡಿಗಳು ಇಷ್ಟಪಡುವ ಹಾಡು‌ ಎಂದು ತಿಳಿಸಿದ್ದಾರೆ.

ಲಿಂಗರಾಜ ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರುಸೇರಿ ನಿರ್ಮಾಣ ಮಾಡಿದ್ದಾರೆ.

ಅಕ್ಷಯ್ ರಿಶಭ್ ಸಂಗೀತ, ವಿಷ್ಣುಪ್ರಸಾದ್ ಕ್ಯಾಮೆರಾ, ಬಿ.ಎಸ್.ಕೆಂಪರಾಜು ಸಂಕಲನವಿದ್ದು, ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸಗೌಡ, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *