ಪ್ರೇಮಕ್ಕೆ ಕಣ್ಣಿಲ್ಲ..
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನನ್ನು ಶ್ರೀಮಂತ ಯುವತಿ ಪ್ರೇಮಿಸುತ್ತಾಳೆ..
ಮುಂದೇನು..
ಎಲ್ಲಾ ಚಿತ್ರಗಳಲ್ಲಿ ಬರುವ ಸಾಹಸ ಇಲ್ಲಿಯೂ ಇದೆಯಾ..
ಅದೇ ಸೈಕಲ್ ಸವಾರಿ..!
ದೇವು ಕೆ.ಅಂಬಿಗ ನಿರ್ದೇಶನದ ಈ ಚಿತ್ರವನ್ನು ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ಮೂಲಕ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ನಿರ್ಮಿಸಿದ್ದಾರೆ.
ನಿರ್ದೇಶಕ ದೇವು ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದು, ಇದು ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿತು.
ದೇವು ಎದುರು ಬಿಜಾಪುರದ ದೀಕ್ಷಾ ಬೀಸೆ ನಟಿಸಿದ್ದಾರೆ. ರೋಹನ್ ಎಸ್. ದೇಸಾಯಿ ಸಂಗೀತದ ಜೊತೆಗೆ ಛಾಯಾಗ್ರಹಣ ಹಾಗೂ ಡಿ.ಐ. ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ.
ನ.3ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಮಾಹಿತಿಗಳನ್ನು ನೀಡಿತು.
ಲಾಕ್ ಡೌನ್ ಸಂದರ್ಭದಲ್ಲಿ ಎರಡು ಪಾತ್ರಗಳನ್ನು ಇಟ್ಟುಕೊಂಡು ಮಾಡಿದ ಕಥೆ ಸ್ವಲ್ಪ ದೊಡ್ಡದು ಮಾಡಿದ್ದರಿಂದ ಈ ಸಿನಿಮಾ ಕಲ್ಪನೆ ಹುಟ್ಟಿಕೊಂಡಿತು ಎಂದರು ನಿರ್ದೇಶಕ ದೇವು.
ಲೋಕೇಶ್ ಸವದಿ ಹಾಗೂ ಶಿವಾಜಿ ಮೆಟಗಾರ್ ಅವರ ಸಹಕಾರದಿಂದ ಈ ಚಿತ್ರದ ನಿರ್ಮಾಣ ಸಾಧ್ಯವಾಗಿದೆ. ತಂತ್ರಜ್ಞರ ಸಹಕಾರವೂ ದೊಡ್ಡದು ಎಂದರು.
ಭರತನಾಟ್ಯ ಕಲಿತಿರುವ ದೀಕ್ಷಾ ಬೀಸೆ
ನಟನೆ ಮೇಲೆ ಇರುವ ಆಸಕ್ತಿ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದೆ. ಸಂಗೀತ ಮತ್ತು ಛಾಯಾಗ್ರಹಣ ಎರಡರ ಜೊತೆ ಕೆಲಸ ಮಾಡಿರುವ ರೋಹನ್ ದೇಸಾಯಿ ಈ ಚಿತ್ರದ ಕೇಂದ್ರ ಬಿಂದು.
ಲೋಕೇಶ್ ಸವದಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನುಳಿದಂತೆ ಗೀತಾ ರಾಘವೇಂದ್ರ, ಕಾವ್ಯ ಮೊದಲಾದವರು ನಟಿಸಿದ್ದಾರೆ.